Publish Date: Sat, 31 Oct 2020 (08:52 IST)
Updated Date: Sat, 31 Oct 2020 (08:54 IST)
ದುಬೈ: ಐಪಿಎಲ್ 13 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 7 ವಿಕೆಟ್ ಗಳಿಂದ ಸೋತಿದ್ದು, ಪ್ಲೇ ಆಫ್ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದೆ.
ದುಬೈ: ಐಪಿಎಲ್ 13 ರಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ಪಂಜಾಬ್ 7 ವಿಕೆಟ್ ಗಳಿಂದ ಸೋತಿದ್ದು, ಪ್ಲೇ ಆಫ್ ಲೆಕ್ಕಾಚಾರಗಳನ್ನೆಲ್ಲಾ ಉಲ್ಟಾ ಮಾಡಿದೆ.
ನಿನ್ನೆ ಪಂಜಾಬ್ ಗೆದ್ದಿದ್ದರೆ ಸುಲಭವಾಗಿ ಪ್ಲೇ ಆಫ್ ಹಂತಕ್ಕೇರುತ್ತಿತ್ತು. ಆದರೆ ಈಗ ನಿನ್ನೆಯ ಸೋಲಿನೊಂದಿಗೆ ಪಂಜಾಬ್ ರಾಜಸ್ಥಾನ್, ಕೆಕೆಆರ್ ನಡುವೆ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನಡೆದಿದೆ. ರಾಜಸ್ಥಾನ್ ನಿನ್ನೆ ಗೆದ್ದು ಪ್ಲೇ ಆಫ್ ಕನಸು ಜೀವಂತವಾಗಿಟ್ಟಿದೆ. ಜತೆಗೆ ಕೆಕೆಆರ್ ಕನಸನ್ನೂ ಚಿಗುರಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ನಿಗದತಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು .ಕ್ರಿಸ್ ಗೇಲ್ 63 ಎಸೆತಗಳಲ್ಲಿ 99 ರನ್ ಚಚ್ಚಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಆರ್ ಆರ್ ಬೆನ್ ಸ್ಟೋಕ್ಸ್ 50 ಮತ್ತು ಸಂಜು ಸ್ಯಾಮ್ಸನ್ 48 ರನ್ ಗಳ ನೆರವಿನಿಂದ 18.3 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸಿ ಜಯಶಾಲಿಯಾಯಿತು.