ದುಬೈ: ಐಪಿಎಲ್ 13 ರಲ್ಲಿ ಪ್ಲೇ ಆಫ್ ಹಂತಕ್ಕೆ ತೇರ್ಗಡೆಯಾಗುವ ಕೋಲ್ಕೊತ್ತಾ ನೈಟ್ ರೈಡರ್ಸ್ ಕನಸಿಗೆ ಚೆನ್ನೈ ಸೂಪರ್ ಕಿಂಗ್ಸ್ ಮುಳ್ಳಾಗಿದೆ.
ಕೆಕೆಆರ್ ನ್ನು 6 ವಿಕೆಟ್ ಗಳಿಂದ ಸೋಲಿಸಿದ ಚೆನ್ನೈ ಔಪಚಾರಿಕ ಪಂದ್ಯದಲ್ಲಿ ಮಿಂಚಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಕೆಕೆಆರ್ ಪರ ನಿತೀಶ್ ರಾಣಾ 87 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಭರ್ತಿ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 178 ರನ್ ಗಳೊಂದಿಗೆ ಗುರಿ ಮುಟ್ಟಿತು. ಋತುರಾಜ್ ಗಾಯಕ್ ವಾಡ್ 72, ಅಂಬಟಿ ರಾಯುಡು 38 ರನ್ ಗಳಿಸಿದರು. ಈ ಗೆಲುವು ಚೆನ್ನೈ ಮೇಲೆ ಯಾವುದೇ ಪ್ರಭಾವ ಬೀರಲ್ಲ. ಆದರೆ ಅಂಕಪಟ್ಟಿಯಲ್ಲಿ ಮೇಲೇರಿ ಪ್ಲೇ ಆಫ್ ಗೆ ಪೈಪೋಟಿ ನಡೆಸುವ ಕೆಕೆಆರ್ ಕನಸಿಗೆ ತಣ್ಣೀರೆರಚಿದೆ.