Select Your Language

Notifications

webdunia
webdunia
webdunia
webdunia

ಐಪಿಎಲ್ 13: ಇಂದು ಪಂಜಾಬ್ ಗೆದ್ದ ಪ್ಲೇ ಆಫ್ ಹಾದಿ ಸುಗಮ

webdunia
ಶುಕ್ರವಾರ, 30 ಅಕ್ಟೋಬರ್ 2020 (09:36 IST)
ದುಬೈ: ಐಪಿಎಲ್ 13 ರಲ್ಲಿ ಇಂದು ಕೆಎಲ್ ರಾಹುಲ್ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.


ಇಂದು ಕಿಂಗ್ಸ್ ಪಂಜಾಬ್ ಗೆದ್ದರೆ ಅದರ ಪ್ಲೇ ಆಫ್ ಹಾದಿ ಸುಗಮವಾಗಲಿದೆ. ಸದ್ಯಕ್ಕೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಪಂಜಾಬ್ ಗೆ ಇನ್ನೊಂದು ಗೆಲುವು ಅದರ ಅಗ್ರ ನಾಲ್ಕರ ಸ್ಥಾನವನ್ನು ಭದ್ರಪಡಿಸಲಿದೆ. ಪಂಜಾಬ್ ಸತತವಾಗಿ ಪಂದ್ಯಗಳನ್ನು ಗೆಲ್ಲುತ್ತಾ ಬಂದಿರುವುದು ಈ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿದೆ. ಆದರೆ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ಡೆಲ್ಲಿ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತ್ತು. ಹೀಗಾಗಿ ಈ ಪಂದ್ಯದಲ್ಲಿ ಪಂಜಾಬ್ ಗೆ ತಕ್ಕ ಫೈಟ್ ಕೊಡುವ ನಿರೀಕ್ಷೆಯಿದೆ. ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia Hindi

ಮುಂದಿನ ಸುದ್ದಿ

ಐಪಿಎಲ್ 13: ಕೋಲ್ಕೊತ್ತಾ ಮುಂದಿನ ಹಾದಿಗೆ ಮುಳ್ಳಾದ ಚೆನ್ನೈ