Select Your Language

Notifications

webdunia
webdunia
webdunia
webdunia

ಐಪಿಎಲ್ 13: ಇಂದು ಡೆಲ್ಲಿ-ಮುಂಬೈ ಫೈಟ್

ಐಪಿಎಲ್ 13: ಇಂದು ಡೆಲ್ಲಿ-ಮುಂಬೈ ಫೈಟ್
ದುಬೈ , ಶನಿವಾರ, 31 ಅಕ್ಟೋಬರ್ 2020 (09:16 IST)
ದುಬೈ: ಐಪಿಎಲ್ 13 ರ ವೀಕೆಂಡ್ ನ ಎರಡು ಪಂದ್ಯಗಳ ಪೈಕಿ ಮೊದಲ ಪಂದ್ಯ ಇಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಲಿದೆ.


ಈಗಾಗಲೇ ಮುಂಬೈ ಪ್ಲೇ ಆಫ್ ಹಂತಕ್ಕೇರಿರುವುದರಿಂದ ಅದಕ್ಕೆ ಈ ಪಂದ್ಯ ಔಪಚಾರಿಕವಾಗಲಿದೆ. ಹಾಗಿದ್ದರೂ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿಯೇ ಪ್ಲೇ ಆಫ್ ಹಂತಕ್ಕೇರುವ ನಿಟ್ಟಿನಿಂದ ಈ ಪಂದ್ಯವನ್ನು ಗೆಲ್ಲಲು ಹವಣಿಸಲಿದೆ. ಇನ್ನು, ಡೆಲ್ಲಿ ಗೆಲುವಿನೊಂದಿಗೆ ಪ್ಲೇ ಆಫ್ ಸ್ಥಾನ ಭದ್ರಪಡಿಸಿಕೊಳ್ಳುವ ತವಕದಲ್ಲಿದೆ. ಸದ್ಯಕ್ಕೆ ರೋಹಿತ್ ಶರ್ಮಾ ಇಲ್ಲದೆಯೂ ಮುಂಬೈ ಮೇಲ್ನೋಟಕ್ಕೆ ಪ್ರಬಲವಾಗಿದೆ. ಹಾಗಿದ್ದರೂ ನಾಯಕ ಶ್ರೇಯಸ್ ಐಯರ್, ಆರಂಭಿಕ ಶಿಖರ್ ಧವನ್ ಸಿಡಿದರೆ ಡೆಲ್ಲಿಯನ್ನು ಕಟ್ಟಿಹಾಕುವುದು ಕಷ್ಟವಾಗಲಿದೆ. ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ಸೋತು ಪ್ಲೇ ಆಫ್ ಲೆಕ್ಕಾಚಾರ ಉಲ್ಟಾ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್