Publish Date: Wed, 30 Sep 2020 (09:22 IST)
Updated Date: Wed, 30 Sep 2020 (09:25 IST)
ದುಬೈ: ಐಪಿಎಲ್ 13 ರ ಇಂದಿನ ಪಂದ್ಯದಲ್ಲಿ ಹೊಸ ಭರವಸೆ ಮೂಡಿಸಿರುವ ರಾಜಸ್ಥಾನ್ ರಾಯಲ್ಸ್, ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ಸೆಣಸಲಿದೆ.
ಮೇಲ್ನೋಟಕ್ಕೆ ರಾಜಸ್ಥಾನ್ ಗೆ ಹೋಲಿಸಿದರೆ ಕೋಲ್ಕೊತ್ತಾ ದುರ್ಬಲ ತಂಡವೆನಿಸುತ್ತದೆ. ಆದರೆ ಶಬ್ನಂ ಗಿಲ್, ಪ್ಯಾಟ್ ಕ್ಯುಮಿನ್ಸ್ ಈಗಾಗಲೇ ಭರವಸೆ ನೀಡಿದ್ದಾರೆ. ಆದರೆ ಇದುವರೆಗೆ ಒಂದು ಗೆಲುವು-ಸೋಲು ಕಂಡು ಸಮಸ್ಥಿತಿಯಲ್ಲಿದೆ. ಇನ್ನು, ರಾಜಸ್ಥಾನ್ ಈಗಾಗಲೇ ದಾಖಲೆಯ ಚೇಸ್ ಮಾಡಿ ತನ್ನ ಬ್ಯಾಟಿಂಗ್ ಆಳಲಗಲ ಪರಿಚಯಿಸಿದೆ. ಹೀಗಾಗಿ ರಾಜಸ್ಥಾನ್ ಕಟ್ಟಿ ಹಾಕಬೇಕಾದರೆ ಕೆಕೆಆರ್ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಬೇಕು.