Publish Date: Wed, 30 Sep 2020 (09:02 IST)
Updated Date: Wed, 30 Sep 2020 (09:03 IST)
ದುಬೈ: ಐಪಿಎಲ್ 13 ರಲ್ಲಿ ಇದುವರೆಗೆ ಸೋಲಿನ ಸರಪಳಿಯನ್ನೇ ಕಂಡ ಸನ್ ರೈಸರ್ಸ್ ಹೈದರಾಬಾದ್ ಕೊನೆಗೂ ಗೆಲುವಿನ ನಿಟ್ಟುಸಿರು ಬಿಟ್ಟಿದೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ 15 ರನ್ ಗಳ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಡೇವಿಡ್ ವಾರ್ನರ್ 45, ಜಾನಿ ಬೇರ್ ಸ್ಟೋ 53, ಕೇನ್ ವಿಲಿಯಮ್ಸನ್ 41 ರನ್ ಗಳಿಸಿದರು.
ಈ ಸಾಧಾರಣ ಮೊತ್ತ ಬೆನ್ನತ್ತುವಲ್ಲಿ ಎಡವಿದ ಡೆಲ್ಲಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು. ಡೆಲ್ಲಿ ಪರ ಶಿಖರ್ ಧವನ್ 34, ರಿಷಬ್ ಪಂತ್ 28, ಶಿಮ್ರಾನ್ ಹೆಟ್ ಮೈರ್ 21 ರನ್ ಗಳಿಸಿದರು. ಹೈದರಾಬಾದ್ ಪರ ರಶೀದ್ ಖಾನ್ 3 ವಿಕೆಟ್ ಕಬಳಿಸಿ ಮಿಂಚಿದರು.