Publish Date: Tue, 29 Sep 2020 (10:23 IST)
Updated Date: Tue, 29 Sep 2020 (10:26 IST)
ದುಬೈ: ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ನಡುವೆ ಮೊನ್ನೆ ನಡೆದಿದ್ದ ಹೈ ವೋಲ್ಟೇಜ್ ಪಂದ್ಯದಲ್ಲಿ ರಾಶಿ ರಾಶಿ ರನ್ ಪೇರಿಸಿಯೂ ಪಂಜಾಬ್ ಸೋತಿತ್ತು. ಈ ಹತಾಶೆ ಹೊರಹಾಕಿದ ಪಂಜಾಬ್ ಗೆ ರಾಜಸ್ಥಾನ್ ವಿಶಿಷ್ಟವಾಗಿ ಸಮಾಧಾನ ಮಾಡಿದೆ.
ಸಾಮಾನ್ಯವಾಗಿ ಐಪಿಎಲ್ ನಲ್ಲಿ ಫ್ರಾಂಚೈಸಿಗಳು ಎದುರಾಳಿಗಳೊಂದಿಗೆ ಸ್ನೇಹ ಹಸ್ತ ಚಾಚಿದ ಘಟನೆ ಅಪರೂಪ. ಆದರ ರಾಜಸ್ಥಾನ್ ತನ್ನಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾದ ಪಂಜಾಬ್ ಗೆ ವಿಶಿಷ್ಟ ಮೆಮೆ ಮೂಲಕ ಸಮಾಧಾನ ಮಾಡಿದೆ. ಪಂಜಾಬ್ ತನ್ನ ಟ್ವಿಟರ್ ಪೇಜ್ ನಲ್ಲಿ ಹತಾಶೆಯಿಂದ ಕೈಗೆ ಸಿಕ್ಕಿದ್ದನ್ನೆಲ್ಲಾ ಎತ್ತಿ ಬಿಸಾಕುವ ವಿಡಿಯೋ ಇಮೇಜ್ ಒಂದನ್ನು ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರಾಜಸ್ಥಾನ್ ಎರಡು ಕಾರ್ಟೂನ್ ಇಮೇಜ್ ಗಳು ಅಪ್ಪಿ ಸಮಾಧಾನ ಮಾಡುವ ವಿಡಿಯೋ ಪ್ರಕಟಿಸುವ ಮೂಲಕ ಎದುರಾಳಿಯನ್ನು ಸಮಾಧಾನಗೊಳಿಸಲು ಯತ್ನಿಸಿದೆ. ರಾಜಸ್ತಾನ್ ತಂಡದ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.