Publish Date: Thu, 24 Sep 2020 (09:54 IST)
Updated Date: Thu, 24 Sep 2020 (09:55 IST)
ದುಬೈ: ಐಪಿಎಲ್ ನಲ್ಲಿ ಇಂದು ನಡೆಯಲಿರುವ ಪಂದ್ಯದಲ್ಲಿ ಯಾರಿಗೆ ಸಪೋರ್ಟ್ ಮಾಡೋದು ಎಂದು ಕರ್ನಾಟಕದ ಅಭಿಮಾನಿಗಳಿಗೆ ಗೊಂದಲ ಕಾಡಬಹುದು. ಯಾಕೆಂದರೆ ಇಂದು ನಡೆಯುತ್ತಿರುವುದು ಆರ್ ಸಿಬಿ ಮತ್ತು ಕನ್ನಡಿಗರೇ ತುಂಬಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ನಡುವಿನ ಪಂದ್ಯ.
ಆರ್ ಸಿಬಿ ಈಗಾಗಲೇ ಒಂದು ಪಂದ್ಯ ಗೆದ್ದ ಉತ್ಸಾಹದಲ್ಲಿದೆ. ಆದರೆ ಅತ್ತ ಪಂಜಾಬ್ ಮೊದಲ ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಜತೆಗೆ ಪಂಜಾಬ್ ತಂಡದಲ್ಲಿ ನಾಯಕನಿಂದ ಹಿಡಿದು ಪ್ರಮುಖ ಬ್ಯಾಟ್ಸ್ ಮನ್, ಕೋಚ್ ಎಲ್ಲರೂ ಕನ್ನಡಿಗರೇ. ಹೀಗಾಗಿ ಇದು ಕನ್ನಡಿಗರ ಪಾಲಿಗೆ ರೋಚಕ ಕದನವಾಗಲಿದೆ. ಪಂದ್ಯ ರಾತ್ರಿ 7.30 ಕ್ಕೆ ಆರಂಭವಾಗಲಿದ್ದು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.