Publish Date: Wed, 23 Sep 2020 (09:25 IST)
Updated Date: Wed, 23 Sep 2020 (09:27 IST)
ದುಬೈ: ರಾಜಸ್ಥಾನ್ ರಾಯಲ್ಸ್ ವಿರದ್ಧದ ಐಪಿಎಲ್ ಪಂದ್ಯದಲ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಧೋನಿ ಬಿರುಸಿನ ಆಟವಾಡಿದರು. ಧೋನಿ ಹೊಡೆದ ಭರ್ಜರಿ ಸಿಕ್ಸರ್ ಒಂದು ನೇರವಾಗಿ ರಸ್ತೆಗೇ ಬಿದ್ದಿತ್ತು!
ರಾಜಸ್ಥಾನ್ ವೇಗಿ ಟಾಮ್ ಕರನ್ ಎಸೆದ ಅಂತಿಮ ಓವರ್ ನಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ್ದರು. ಈ ಪೈಕಿ ಎರಡನೇ ಸಿಕ್ಸರ್ ನ್ನು ಧೋನಿ ಎಷ್ಟು ಜೋರಾಗಿ ಹೊಡೆದಿದ್ದರೆಂದರೆ ಅದು ನೇರವಾಗಿ ಮೈದಾನ ದಾಟಿ ರಸ್ತೆಗೆ ಬಿದ್ದಿತ್ತು. ಶಾರ್ಜಾ ಮೈದಾನದಲ್ಲಿ ತಡೆಗೋಡೆ ಎತ್ತರದಲ್ಲಿ ಇಲ್ಲ. ಹೀಗಾಗಿ ಬಾಲ್ ಬೇಗನೇ ಮೈದಾನ ದಾಟಿ ಹೊರ ಚಿಮ್ಮುತ್ತವೆ.