Publish Date: Sat, 24 Oct 2020 (11:52 IST)
Updated Date: Sat, 24 Oct 2020 (11:54 IST)
ದುಬೈ: ಐಪಿಎಲ್ 13 ರಲ್ಲಿ ತಂಡ ಹೀನಾಯ ಪ್ರದರ್ಶನ ನೀಡಿದ ಬಳಿಕ ಇನ್ನು ಮುಂದಿನ ಐಪಿಎಲ್ ನಲ್ಲಿ ಧೋನಿ ಆಡುವುದು ಅನುಮಾನ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ.
ಇದಕ್ಕೆ ಕಾರಣ ಮುಂಬೈ ವಿರುದ್ಧ ಪಂದ್ಯ ಮುಗಿದ ಬಳಿಕ ಧೋನಿ ತೋರಿದ ವರ್ತನೆ. ಧೋನಿ ತಮ್ಮ ಆಪ್ತರಾದ ಹಾರ್ದಿಕ್ ಪಾಂಡ್ಯ ಮತ್ತು ಕೃನಾಲ್ ಪಾಂಡ್ಯಗೆ ನಿನ್ನೆ ತಮ್ಮ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೆ ಮೊದಲು ರಾಜಸ್ಥಾನ್ ಆಟಗಾರ ಜೋಸ್ ಬಟ್ಲರ್ ಗೂ ಜೆರ್ಸಿ ಉಡುಗೊರೆ ನೀಡಿದ್ದರು. ಈ ಮೂಲಕ ತಮ್ಮನ್ನು ಆರಾಧಿಸುವ, ಆಪ್ತ ಕ್ರಿಕೆಟಿಗರಿಗೆ ಜೆರ್ಸಿ ನೀಡುತ್ತಿರುವುದು ನಿವೃತ್ತಿಯ ಸೂಚನೆಯಿರಬಹುದು ಎಂದು ಅಭಿಮಾನಿಗಳು ಗುಸು ಗುಸು ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೂ ನಿವೃತ್ತಿ ಹೇಳಿರುವ ಧೋನಿ ಮುಂದೆ ಐಪಿಎಲ್ ನಿಂದಲೂ ನಿವೃತ್ತಿಯಾದರೆ ಅವರನ್ನು ಅಂಗಣದಲ್ಲಿ ಮಿಸ್ ಮಾಡಿಕೊಳ್ಳುವುದಾಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.