Publish Date: Sat, 24 Oct 2020 (10:25 IST)
Updated Date: Sat, 24 Oct 2020 (10:27 IST)
ದುಬೈ: ಐಪಿಎಲ್ 13 ರಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಸತತ ಶತಕ ದಾಖಲಿಸಿದ್ದೇ ತಡ, ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ಶಿಖರ್ ಧವನ್ ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದಾರೆ.
ಸದ್ಯಕ್ಕೆ ಐಪಿಎಲ್ 13 ರ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ 465 ರನ್ ಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಶಿಖರ್ ನಾನು ಮುಟ್ಟಿದ್ದೆಲ್ಲವೂ ಇನ್ನು ಮುಂದೆ ಚಿನ್ನವೇ ಎಂದು ಬೀಗಿದ್ದಾರೆ. ‘ಜನ ಏನು ಹೇಳ್ತಾರೆ ಎಂಬುದರ ಬಗ್ಗೆ ನಾನು ತಲೆಯೇ ಕೆಡಿಸಿಕೊಳ್ಳಲ್ಲ. ಡ್ರೆಸ್ಸಿಂಗ್ ರೂಂನಲ್ಲೂ ಅಂತಹದ್ದೇ ಸಕಾರಾತ್ಮಕ ವಾತಾವರಣವಿದೆ. ನಾನೆಷ್ಟು ತಯಾರಾಗಿದ್ದೇನೆ, ಎಷ್ಟು ಫಿಟ್ ಆಗಿದ್ದೇನೆ, ಎಷ್ಟು ಕಠಿಣ ಪರಿಶ್ರಮ ಪಡುತ್ತೇನೆ ಎಂಬುದು ನನಗೆ ಗೊತ್ತು. ಸದ್ಯಕ್ಕೆ ನಾನು ಏನೇ ಮುಟ್ಟಿದ್ದರೂ ಚಿನ್ನವಾಗಿಸುವ ಆತ್ಮವಿಶ್ವಾಸವಿದೆ’ ಎಂದಿದ್ದಾರೆ ಧವನ್.