ಐಪಿಎಲ್: ಆರ್ ಸಿಬಿ ಪಂದ್ಯದ ನಡುವೆ ಕಾಣೆಯಾದ ಬಾಲ್ ಅಂಪಾಯರ್ ಜೇಬಿನಲ್ಲಿ!

Webdunia
ಗುರುವಾರ, 25 ಏಪ್ರಿಲ್ 2019 (07:50 IST)
ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೇಳೆ ಚೆಂಡು ಕಾಣೆಯಾದ ಪ್ರಸಂಗ ನಡೆಯಿತು.

 
ಅಂಪಾಯರ್ ಮ್ಯಾಚ್ ಬಾಲ್ ಎಲ್ಲಿ ಇಟ್ಟಿದ್ದೇನೆಂದು ಮರೆತು ಪಂದ್ಯ ಒಂದು ನಿಮಿಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಕೊನೆಗೆ ರಿಪ್ಲೇನಲ್ಲಿ ಅಂಪಾಯರ್ ಶಂಸುದ್ದೀನ್ ಮ್ಯಾಚ್  ಬಾಲ್ ನ್ನು ಪಾಕೆಟ್ ನಲ್ಲಿ ಇರಿಸಿದ್ದು ಪತ್ತೆಯಾಯಿತು.

ಬೌಲರ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಬಳಿ ಮ್ಯಾಚ್ ಬಾಲ್ ಕೇಳಿದಾಗ ಎಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಕನ್ ಫ್ಯೂಸ್ ಆದ ಅಶ್ವಿನ್ ಅಂಪಾಯರ್ ಬಳಿ ಕೇಳಿದಾಗ ಅವರಿಗೂ ತಾನು ಬಾಲ್ ಎಲ್ಲಿಟ್ಟಿದ್ದೇನೆಂದು ನೆನಪಾಗಲಿಲ್ಲ. ಕೊನೆಗೆ ಲೆಗ್ ಅಂಪಾಯರ್ ಗೂ ತಿಳಿಯದಾದಾಗ ಫೋರ್ತ್ ಅಂಪಾಯರ್ ಹೊಸ ಬಾಲ್ ತಂದು ಕೊಟ್ಟರು. ಇನ್ನೇನು ಹೊಸ ಬಾಲ್ ಬಳಸಬೇಕೆನ್ನುವಷ್ಟರಲ್ಲಿ ರಿಪ್ಲೇನಲ್ಲಿ ಅಂಪಾಯರ್ ಜೇಬಿನಲ್ಲಿ ಬಾಲ್ ಇಟ್ಟಿದ್ದು ಕಂಡುಬಂತು.

ತಕ್ಷಣವೇ ಅಂಪಾಯರ್ ಶಂಸುದ್ದೀನ್ ಬೌಲರ್ ಬಳಿ ತೆರಳಿ ಹಳೇ ಬಾಲ್ ನ್ನೇ ನೀಡಿದ ಮೇಲೆ ಪಂದ್ಯ ಮುಂದುವರಿಯಿತು. ಈಗಾಗಲೇ ನೋ ಬಾಲ್ ಪ್ರಮಾದಗಳಿಂದ ಐಪಿಎಲ್ ನಲ್ಲಿ ಅಂಪಾಯರ್ ಗಳ ಕಾರ್ಯವೈಖರಿ ಬಗ್ಗೆ ಕ್ರಿಕೆಟಿಗರು ಅಸಮಾಧಾನ ಹೊಂದಿದ್ದಾರೆ. ಅದಕ್ಕೆ ಇದೂ ಸೇರ್ಪಡೆಯಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಆರ್ ಸಿಬಿಗೆ ಒಡತಿಯಾಗಲು ಹೊರಟ ಅನುಷ್ಕಾ ಶರ್ಮಾ

IND vs NZ: ಸಿಕ್ಕ ಅವಕಾಶ ಬಳಸಿಕೊಂಡ ರಿಂಕು ಸಿಂಗ್: ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಮಾಡಿದ್ದೇನು

ಎಂ ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಾಟಕ್ಕೆ ಕೊನೆಗೂ ಅಧಿಕೃತವಾಗಿ ಸಿಕ್ತು ಗ್ರೀನ್‌ಸಿಗ್ನಲ್

ಇನ್ನೂ ಸ್ಟೇಡಿಯಂ ಖಚಿತಪಡಿಸದ ಆರ್‌ಸಿಬಿ: ವೇಳಾಪಟ್ಟಿ ಸಿದ್ಧಪಡಿಸುತ್ತಿರುವ ಬಿಸಿಸಿಐ ಹೇಳಿದ್ದೇನು

IND vs NZ: ಏಕದಿನ ಸರಣಿ ಕತೆ ಹಾಗಾಯ್ತು, ಇಂದಿನಿಂದ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಟಿ20 ಸರಣಿ

ಮುಂದಿನ ಸುದ್ದಿ
Show comments