Publish Date: Thu, 25 Apr 2019 (07:50 IST)
Updated Date: Thu, 25 Apr 2019 (07:53 IST)
ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟಿಂಗ್ ವೇಳೆ ಚೆಂಡು ಕಾಣೆಯಾದ ಪ್ರಸಂಗ ನಡೆಯಿತು.
ಅಂಪಾಯರ್ ಮ್ಯಾಚ್ ಬಾಲ್ ಎಲ್ಲಿ ಇಟ್ಟಿದ್ದೇನೆಂದು ಮರೆತು ಪಂದ್ಯ ಒಂದು ನಿಮಿಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತು. ಕೊನೆಗೆ ರಿಪ್ಲೇನಲ್ಲಿ ಅಂಪಾಯರ್ ಶಂಸುದ್ದೀನ್ ಮ್ಯಾಚ್ ಬಾಲ್ ನ್ನು ಪಾಕೆಟ್ ನಲ್ಲಿ ಇರಿಸಿದ್ದು ಪತ್ತೆಯಾಯಿತು.
ಬೌಲರ್ ಪಂಜಾಬ್ ನಾಯಕ ರವಿಚಂದ್ರನ್ ಅಶ್ವಿನ್ ಬಳಿ ಮ್ಯಾಚ್ ಬಾಲ್ ಕೇಳಿದಾಗ ಎಷ್ಟು ಹುಡುಕಾಡಿದರೂ ಸಿಗಲೇ ಇಲ್ಲ. ಕನ್ ಫ್ಯೂಸ್ ಆದ ಅಶ್ವಿನ್ ಅಂಪಾಯರ್ ಬಳಿ ಕೇಳಿದಾಗ ಅವರಿಗೂ ತಾನು ಬಾಲ್ ಎಲ್ಲಿಟ್ಟಿದ್ದೇನೆಂದು ನೆನಪಾಗಲಿಲ್ಲ. ಕೊನೆಗೆ ಲೆಗ್ ಅಂಪಾಯರ್ ಗೂ ತಿಳಿಯದಾದಾಗ ಫೋರ್ತ್ ಅಂಪಾಯರ್ ಹೊಸ ಬಾಲ್ ತಂದು ಕೊಟ್ಟರು. ಇನ್ನೇನು ಹೊಸ ಬಾಲ್ ಬಳಸಬೇಕೆನ್ನುವಷ್ಟರಲ್ಲಿ ರಿಪ್ಲೇನಲ್ಲಿ ಅಂಪಾಯರ್ ಜೇಬಿನಲ್ಲಿ ಬಾಲ್ ಇಟ್ಟಿದ್ದು ಕಂಡುಬಂತು.
ತಕ್ಷಣವೇ ಅಂಪಾಯರ್ ಶಂಸುದ್ದೀನ್ ಬೌಲರ್ ಬಳಿ ತೆರಳಿ ಹಳೇ ಬಾಲ್ ನ್ನೇ ನೀಡಿದ ಮೇಲೆ ಪಂದ್ಯ ಮುಂದುವರಿಯಿತು. ಈಗಾಗಲೇ ನೋ ಬಾಲ್ ಪ್ರಮಾದಗಳಿಂದ ಐಪಿಎಲ್ ನಲ್ಲಿ ಅಂಪಾಯರ್ ಗಳ ಕಾರ್ಯವೈಖರಿ ಬಗ್ಗೆ ಕ್ರಿಕೆಟಿಗರು ಅಸಮಾಧಾನ ಹೊಂದಿದ್ದಾರೆ. ಅದಕ್ಕೆ ಇದೂ ಸೇರ್ಪಡೆಯಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
Krishnaveni K
Publish Date: Thu, 25 Apr 2019 (07:50 IST)
Updated Date: Thu, 25 Apr 2019 (07:53 IST)