Publish Date: Sat, 23 Mar 2019 (09:25 IST)
Updated Date: Sat, 23 Mar 2019 (09:27 IST)
ಚೆನ್ನೈ: ಈ ವರ್ಷದ ಐಪಿಎಲ್ ಪಂದ್ಯಾವಳಿಗೆ ಇಂದಿನಿಂದ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಚಾಲನೆ ಸಿಗಲಿದ್ದು, ಈ ಬಾರಿಯಾದರೂ ಕಪ್ ನಮ್ದೇ ಎನ್ನುವುದನ್ನು ನಿಜ ಮಾಡುವ ನಿರೀಕ್ಷೆ ಆರ್ ಸಿಬಿ ಪ್ರೇಕ್ಷಕರದ್ದಾಗಿದೆ.
ಇಂದು ಧೋನಿ ನೇತೃತ್ವದ ಚೆನ್ನೈ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಈ ಹೈ ವೋಲ್ಟೇಜ್ ಪಂದ್ಯವನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆರ್ ಸಿಬಿಗೆ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಬಲವಿದ್ದರೆ, ಅತ್ತ ಚೆನ್ನೈಗೆ ಧೋನಿಯೇ ಆಕ್ಸಿಜನ್. ಜತೆಗೆ ಡ್ವಾನ್ ಬ್ರಾವೋ, ಫಾ ಡು ಪ್ಲೆಸಿಸ್, ಸುರೇಶ್ ರೈನಾ ಬಲವಿದೆ. ಎರಡೂ ತಂಡಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಧೋನಿ ಚಾಣಕ್ಷ್ಯ ನಾಯಕತ್ವ.
ಅದನ್ನು ದಾಟಿ ಚಾಂಪಿಯನ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ತಂಡವನ್ನು ಈ ಬಾರಿಯಾದರೂ ಗೆಲುವಿನ ದಡ ಮುಟ್ಟಿಸಿ ಕಪ್ ನಮ್ದೇ ಎನ್ನಬೇಕಿದೆ. ಜತೆಗೆ ಇಷ್ಟುವರ್ಷದಿಂದ ನಾಯಕತ್ವ ವಹಿಸಿಯೂ ಕಪ್ ಗೆದ್ದಿಲ್ಲ ಎಂಬ ಟೀಕೆಗಳಿಗೆ ಕೊಹ್ಲಿ ಈ ಕೂಟದಲ್ಲಿ ಉತ್ತರಕೊಡಬೇಕಿದೆ.
ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
ಸ್ಥಳ: ಚೆನ್ನೈ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ