Publish Date: Mon, 22 Apr 2019 (07:00 IST)
Updated Date: Mon, 22 Apr 2019 (07:02 IST)
ಬೆಂಗಳೂರು: ಸತತ ಸೋಲಿನಿಂದ ಟೀಕೆಗೊಳಗಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಪಡೆಯನ್ನು ರೋಚಕ 1 ರನ್ ನಿಂದ ಸೋಲಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ಕೊಹ್ಲಿಯನ್ನು ಆರಂಭದಲ್ಲಿಯೇ ಕಳೆದುಕೊಂಡು ಆತಂಕಕ್ಕೀಡಾಯಿತು. ಆದರೆ ಬಳಿಕ ಪಾರ್ಥಿವ್ ಪಟೇಲ್ ಅರ್ಧಶತಕ ಸಿಡಿಸಿ (53) ತಂಡಕ್ಕೆ ಆಧಾರವಾದರು. ಇದರಿಂದಾಗಿ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿತು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಚೆನ್ನೈ ಆರಂಭದಲ್ಲಿ ಕುಸಿತದ ಹಾದಿಯಲ್ಲಿತ್ತು. ತೀರಾ ಹೀನಾಯ ಸೋಲು ಕಾಣುತ್ತದೆ ಎಂದಾಗ ನಾಯಕನ ಆಟವಾಡಿದ ಧೋನಿ 48 ಎಸೆತಗಳಲ್ಲಿ 84 ರನ್ ಸಿಡಿಸಿ ಗೆಲುವಿನ ಅಂಚಿಗೆ ತಂದು ನಿಲ್ಲಿಸಿದರು. ಆದರೆ ಅಂತಿಮ ಎಸೆತದಲ್ಲಿ ಬೆಸ್ಟ್ ಫಿನಿಶರ್ ಧೋನಿ ಉಮೇಶ್ ಯಾದವ್ ಎಸೆತದಲ್ಲಿ ಔಟಾದರು. ಆಗ ಚೆನ್ನೈ ಗೆಲುವಿಗೆ ಒಂದೇ ರನ್ ದೂರದಲ್ಲಿತ್ತು! ಈ ಮೂಲಕ ಬೆಂಗಳೂರಿಗೆ ರೋಚಕ ಜಯ ದಾಖಲಾಯ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ