Publish Date: Sun, 21 Apr 2019 (13:38 IST)
Updated Date: Sun, 21 Apr 2019 (13:40 IST)
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಆಡುವ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಎಂಥಾ ಕುಚುಕು ದೋಸ್ತುಗಳು ಎಂದು ಎಲ್ಲರಿಗೂ ಗೊತ್ತು.
ಇದೀಗ ತಮ್ಮ ಪಕ್ಕಾ ದೋಸ್ತು ವಿರಾಟ್ ಗೆ ಎಬಿಡಿ ಹೊಸ ನಿಕ್ ನೇಮ್ ಇಟ್ಟಿದ್ದಾರೆ. ಅದೇನೆಂದು ಗೊತ್ತಾ? ವಿರಾಟ್ ಗೆ ಈಗಾಗಲೇ ಚೀಕೂ, ಕಿಂಗ್ ಕೊಹ್ಲಿ ಎಂದೆಲ್ಲಾ ಅಡ್ಡ ಹೆಸರುಗಳಿವೆ. ಅದರ ಮಧ್ಯೆ ಇದೀಗ ಹೊಸ ಹೆಸರು ಸೇರ್ಪಡೆಯಾಗಿದೆ.
ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದ ಬಳಿಕ ಎಬಿಡಿ ಕೊಹ್ಲಿಗೆ ‘ಲಿಟಲ್ ಬಿಸ್ಕಟ್’ ಎಂದಿದ್ದು, ಹೊಸ ನಿಕ್ ನೇಮ್ ಬಹಿರಂಗಪಡಿಸಿದ್ದಾರೆ. ಈ ಪಂದ್ಯದಲ್ಲಿ ಶತಕ ಭಾರಿಸುತ್ತೇನೆಂದು ಮೊದಲೇ ಎಬಿಡಿಗೆ ಕೊಹ್ಲಿ ಪ್ರಾಮಿಸ್ ಮಾಡಿದ್ದರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ