Publish Date: Sat, 20 Apr 2019 (06:49 IST)
Updated Date: Sat, 20 Apr 2019 (06:50 IST)
ಕೋಲ್ಕೊತ್ತಾ: ಆರ್ ಸಿಬಿ ವಿರುದ್ಧ ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಮೊಯಿನ್ ಅಲಿ ಸಿಡಿಲಬ್ಬರದ ಬ್ಯಾಟಿಂಗ್ ಗೆ ಕೆಕೆಆರ್ ಸ್ಪಿನ್ನರ್ ಕುಲದೀಪ್ ಯಾದವ್ ಬಸವಳಿದು ಕುಸಿದು ಕೂತ ಘಟನೆ ನಡೆದಿದೆ.
ಮೊಯಿನ್ ಈ ಪಂದ್ಯದಲ್ಲಿ 28 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ 66 ರನ್ ಸಿಡಿಸಿದ್ದರು. ಅದರಲ್ಲೂ ಕುಲದೀಪ್ ಯಾದವ್ ಒಂದೇ ಓವರ್ ನಲ್ಲಿ 26 ರನ್ ಸೂರೆ ಮಾಡಿದ್ದರು.
ಮೊಯಿನ್ ಅಲಿ ಹೊಡೆತಕ್ಕೆ ನಲುಗಿನ ಕುಲದೀಪ್ ಯಾದವ್ ಕುಸಿದು ಕೂತಾಗ ಅವರ ಕಣ್ಣಲ್ಲಿ ಅಕ್ಷರಶಃ ನೀರು ತುಂಬಿತ್ತು. ಬಳಿಕ ಸಹ ಆಟಗಾರರು ನೀರು ಕುಡಿಯಲು ಕೊಟ್ಟು ಸುಧಾರಿಸಲು ಹೇಳಿದರು. ಒಟ್ಟು 4 ಓವರ್ ಬೌಲಿಂಗ್ ಮಾಡಿದ ಕುಲದೀಪ್ 59 ರನ್ ಬಿಟ್ಟುಕೊಟ್ಟು 1 ವಿಕೆಟ್ ಕಬಳಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ