Publish Date: Sat, 20 Apr 2019 (06:22 IST)
Updated Date: Sat, 20 Apr 2019 (06:24 IST)
ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿ ಎದುರೇ ಅವರ ಟ್ರೇಡ್ ಮಾರ್ಕ್ ಹೊಡೆತ ಹೆಲಿಕಾಪ್ಟರ್ ಶಾಟ್ ಹೊಡೆದಿದ್ದ ಮುಂಬೈ ಇಂಡಿಯನ್ಸ್ ಆಟಗಾರ ಹಾರ್ದಿಕ್ ಪಾಂಡ್ಯ ಆವತ್ತು ಧೋನಿ ಏನು ಹೇಳಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಹೆಲಿಕಾಪ್ಟರ್ ಶಾಟ್ ಹೊಡೆದ ತಕ್ಷಣ ಧೋನಿ ಏನಾದರೂ ಪ್ರತಿಕ್ರಿಯಿಸಬಹುದು ಎಂದು ನಿರೀಕ್ಷಿಸಿದ್ದೆ ಎಂದು ಪಾಂಡ್ಯ ಆವತ್ತು ಹೇಳಿದ್ದರು. ಆದರೆ ಆಗ ಧೋನಿ ಏನೂ ಹೇಳಿರಲಿಲ್ಲ.
ಆದರೆ ಪಂದ್ಯದ ಬಳಿಕ ಧೋನಿಯ ಅಭಿಪ್ರಾಯ ಕೇಳಿಯೇ ತೀರುತ್ತೇನೆಂದು ಹಾರ್ದಿಕ್ ಸೀದಾ ಚೆನ್ನೈ ಡ್ರೆಸ್ಸಿಂಗ್ ರೂಂಗೆ ತೆರಳಿದ್ದರಂತೆ. ಬಳಿಕ ಧೋನಿ ಬಳಿ ನನ್ನ ಹೆಲಿಕಾಪ್ಟರ್ ಶಾಟ್ ಹೇಗಿತ್ತು ಎಂದು ಕೇಳಿದ್ದರಂತೆ. ಅದಕ್ಕೆ ಧೋನಿ ‘ಚೆನ್ನಾಗಿತ್ತು’ ಎಂದಿದ್ದರು ಎಂದು ಹಾರ್ದಿಕ್ ಸ್ಮರಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ