Publish Date: Thu, 18 Apr 2019 (06:45 IST)
Updated Date: Thu, 18 Apr 2019 (06:47 IST)
ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಧೋನಿ ಇರುವಾಗ ನನಗೇನೂ ಕೆಲಸವಿಲ್ಲ ಎಂದಿದ್ದಾರೆ.
ಧೋನಿಗೆ ಹೆಚ್ಚುವರಿಯಾಗಿ ದಿನೇಶ್ ಕಾರ್ತಿಕ್ ರನ್ನು ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಆಯ್ಕೆ ಮಾಡಲಾಗಿತ್ತು. ಕಾರ್ತಿಕ್ ಬದಲು ರಿಷಬ್ ಪಂತ್ ರನ್ನು ಆಯ್ಕೆ ಮಾಡಿದ್ದು ಚರ್ಚೆಯ ವಿಷಯವಾಗಿದೆ.
ಇದೀಗ ತಮ್ಮ ಉಪಸ್ಥಿತಿ ಬಗ್ಗೆ ಮಾತನಾಡಿರುವ ದಿನೇಶ್ ‘ಧೋನಿ ತಂಡದಲ್ಲಿರುವಾಗ ನಾನು ಪ್ರಥಮ ಚಿಕಿತ್ಸೆ ಬಾಕ್ಸ್ ನಂತೆ. ವಿಶ್ವಕಪ್ ತಂಡಕ್ಕೆ ಆಯ್ಕೆಯಾಗಿದ್ದು ಅದೃಷ್ಟ. ಧೋನಿ ಗಾಯಗೊಂಡರೆ ಮಾತ್ರ ನನಗೆ ಕೆಲಸ’ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ