Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆ ಆಯ್ಕೆಯಾಗದಿದ್ದರೂ ಟೀಂ ಇಂಡಿಯಾಕ್ಕೆ ನೆರವಾಗಲಿರುವ ಕ್ರಿಕೆಟಿಗರು ಇವರು!

ವಿಶ್ವಕಪ್ ಗೆ ಆಯ್ಕೆಯಾಗದಿದ್ದರೂ ಟೀಂ ಇಂಡಿಯಾಕ್ಕೆ ನೆರವಾಗಲಿರುವ ಕ್ರಿಕೆಟಿಗರು ಇವರು!
ಮುಂಬೈ , ಬುಧವಾರ, 17 ಏಪ್ರಿಲ್ 2019 (07:43 IST)
ಮುಂಬೈ: ವಿಶ್ವಕಪ್ ತಂಡಕ್ಕೆ ಆಯ್ಕೆಯಾಗದಿದ್ದರೂ ಮಹಾನ್ ಕೂಟಕ್ಕೆ ಟೀಂ ಇಂಡಿಯಾ ಸಜ್ಜಾಗಲು ಅವಕಾಶ ವಂಚಿತರಾದ ಈ ಕ್ರಿಕೆಟಿಗರು ನೆರವಾಗಲಿದ್ದಾರೆ.


ಯುವ ಬೌಲರ್ ಗಳಾದ ಖಲೀಲ್ ಅಹಮ್ಮದ್, ನವದೀಪ್ ಸೈನಿ, ಅವೇಶ್ ಮತ್ತು ದೀಪಕ್ ಚಹರ್ ಟೀಂ ಇಂಡಿಯಾ ಅಭ್ಯಾಸಕ್ಕೆ ನೆರವಾಗಲಿದ್ದಾರೆ.

ವಿಶ್ವಕಪ್ ತಂಡದಲ್ಲಿ ಮೂವರು ವೇಗಿಗಳು ಆಯ್ಕೆಯಾಗಿದ್ದಾರೆ. ಅಭ್ಯಾಸದ ವೇಳೆ ಈ ಯುವ ಬೌಲರ್ ಗಳನ್ನು ಬಳಸಿಕೊಂಡು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಅಭ್ಯಾಸ ನಡೆಸಲಿದ್ದಾರೆ.

ಅದರಲ್ಲೂ ಖಲೀಲ್ ಅಹಮ್ಮದ್ ಮತ್ತು ಸೈನಿ ಹೆಸರು ತಂಡದ ಆಯ್ಕೆ ವೇಳೆ ಪ್ರಸ್ತಾಪವಾಗಿತ್ತಂತೆ. ಹೀಗಾಗಿ ಈಗಾಗಲೇ ಆಯ್ಕೆಗೊಂಡ ಬೌಲರ್ ಗಳ ಪೈಕಿ ಯಾರಾದರೂ ಗಾಯಗೊಂಡರೆ ಈ ಇಬ್ಬರಲ್ಲಿ ಒಬ್ಬರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಮತ್ತೆ ಮಿಂಚಿದ ಕೆಎಲ್ ರಾಹುಲ್, ಪಂಜಾಬ್ ಗೆ ಗೆಲುವು