Select Your Language

Notifications

webdunia
webdunia
webdunia
webdunia

ಯಾಕೆ ಎಲ್ಲರೂ ಧೋನಿ ಹಿಂದೆ ಬೀಳ್ತಾರೆ ಅಂತ ಗೊತ್ತಾಗಲ್ಲ ಎಂದ ವಿರಾಟ್ ಕೊಹ್ಲಿ

ಯಾಕೆ ಎಲ್ಲರೂ ಧೋನಿ ಹಿಂದೆ ಬೀಳ್ತಾರೆ ಅಂತ ಗೊತ್ತಾಗಲ್ಲ ಎಂದ ವಿರಾಟ್ ಕೊಹ್ಲಿ
ನವದೆಹಲಿ , ಶುಕ್ರವಾರ, 19 ಏಪ್ರಿಲ್ 2019 (06:15 IST)
ನವದೆಹಲಿ: ಈಗಲೂ ಟೀಂ ಇಂಡಿಯಾಗೆ ಅನಧಿಕೃತ ಕ್ಯಾಪ್ಟನ್ ಆಗಿರುವ ಧೋನಿ ಒಂದೇ ಒಂದು ತಪ್ಪು ಮಾಡಿದರೂ ಅವರನ್ನು ಜರೆಯುವವರೇ ಹೆಚ್ಚು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮಾತನಾಡಿದ್ದಾರೆ.


‘ಯಾಕೆ ಎಲ್ಲರೂ ಧೋನಿ ಬೆನ್ನು ಬೀಳುತ್ತಾರೆ ಎಂದು ನನಗೆ ಅರ್ಥವಾಗುತ್ತಿಲ್ಲ. ಅವರು ತಂಡದಲ್ಲಿರುವುದರ ಮಹತ್ವ ನನಗೆ ಗೊತ್ತು. ಅವರು ಒಂದನೇ ಬಾಲ್ ನಿಂದ 300 ನೇ ಬಾಲ್ ನವರೆಗೆ ಆಟವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತಾರೆ. ಅವರ ಸಲಹೆಗಳು ನನಗೆ ಮುಖ್ಯ’ ಎಂದು ಕೊಹ್ಲಿ ಧೋನಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲ ತಾವು ತಂಡಕ್ಕೆ ಕಾಲಿಟ್ಟಾಗ ತಮಗೆ ಧೋನಿಯಿಂದ ಸಿಕ್ಕ ಬೆಂಬಲವನ್ನು ಮರೆಯಲಾರೆ ಎಂದಿದ್ದಾರೆ. ಅವರು ನನಗೆ ಯಾವತ್ತಿಗೂ ಕ್ಯಾಪ್ಟನ್ ಎಂದು ಕೊಹ್ಲಿ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

2019 ರ ವಿಶ್ವಕಪ್ ಟೀಂ ಇಂಡಿಯಾದಲ್ಲಿ ಮಿಸ್ ಆಗಿರುವುದು ಏನು ಗೊತ್ತಾ?!