Select Your Language

Notifications

webdunia
webdunia
webdunia
webdunia

ವಿಶ್ವಕಪ್ ಗೆ ಆಯ್ಕೆಯಾಗದ ಬೇಸರ ಹೊರ ಹಾಕಿದ ಅಂಬಟಿ ರಾಯುಡು ಬಗ್ಗೆ ಬಿಸಿಸಿಐ ಹೇಳಿದ್ದು ಹೀಗೆ

ವಿಶ್ವಕಪ್ ಗೆ ಆಯ್ಕೆಯಾಗದ ಬೇಸರ ಹೊರ ಹಾಕಿದ ಅಂಬಟಿ ರಾಯುಡು ಬಗ್ಗೆ ಬಿಸಿಸಿಐ ಹೇಳಿದ್ದು ಹೀಗೆ
ಮುಂಬೈ , ಗುರುವಾರ, 18 ಏಪ್ರಿಲ್ 2019 (06:52 IST)
ಮುಂಬೈ: ಇಂಗ್ಲೆಂಡ್ ನಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಟೀಂ ಇಂಡಿಯಾಕ್ಕೆ ಆಯ್ಕೆಯಾಗದ ಬ್ಯಾಟ್ಸ್ ಮನ್ ಅಂಬಟಿ ರಾಯುಡು ಆ ಬೇಸರವನ್ನು ವ್ಯಂಗ್ಯ ಟ್ವೀಟ್ ಮಾಡುವ ಮೂಲಕ ಹೊರ ಹಾಕಿದ್ದರು.


ಈ ಬಗ್ಗೆ ಇದೀಗ ಬಿಸಿಸಿಐ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ. ವಿಶ್ವಕಪ್ ಗೆ ಆಯ್ಕೆಯಾಗದೇ ಇದ್ದ ಬೆನ್ನಲ್ಲೇ ರಾಯುಡು ‘ವಿಶ್ವಕಪ್ ಕ್ರಿಕೆಟ್ ನೋಡಲು 3 ಡಿ ಕನ್ನಡಕಕ್ಕೆ ಈಗಷ್ಟೇ ಆರ್ಡರ್ ಮಾಡಿರುವೆ’ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಅಧಿಕಾರಿಗಳು ‘ರಾಯುಡು ಕಾಮೆಂಟ್ ನ್ನು ಗಮನಿಸಿದ್ದೇವೆ. ವಿಶ್ವಕಪ್ ಗೆ ಆಯ್ಕೆಯಾಗದೇ ಇರುವ ಬೇಸರ ಕೆಲವು ಆಟಗಾರರಲ್ಲಿ ಇರುವುದು ಸಹಜ. ಆದರೆ ಆ ಬೇಸರವನ್ನು ಹೊರ ಹಾಕುವಾಗ ಗಡಿ ದಾಡದಂತೆ ಎಚ್ಚರಿಕೆ ವಹಿಸುವುದು ಮುಖ್ಯ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಆಂಗ್ಲ ಮಾಧ್ಯಮದ ಮೂಲಕ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಹೊಸ ದಾಖಲೆ ಬರೆದ ಕೆಎಲ್ ರಾಹುಲ್