Select Your Language

Notifications

webdunia
webdunia
webdunia
webdunia

ಕೋಚ್ ರವಿಶಾಸ್ತ್ರಿಗೇ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಲ್ಲ!

ಕೋಚ್ ರವಿಶಾಸ್ತ್ರಿಗೇ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಲ್ಲ!
ಮುಂಬೈ , ಗುರುವಾರ, 18 ಏಪ್ರಿಲ್ 2019 (08:03 IST)
ಮುಂಬೈ: ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಯಾರು ಎಂದರೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಭಾರತದ ಹೊರತಾಗಿ ಬೇರೊಂದು ತಂಡದ ಹೆಸರು ಹೇಳಿದ್ದಾರೆ.


ರವಿಶಾಸ್ತ್ರಿ ಪ್ರಕಾ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡ ಅತಿಥೇಯ ಇಂಗ್ಲೆಂಡ್. ಅವರ ಬಳಿ ಪ್ರತಿಭಾವಂತ ಆಟಗಾರರಿದ್ದಾರೆ. ಅವರು ಸತತವಾಗಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಹೀಗಾಗಿ ಅವರೇ ಫೇವರಿಟ್ ಎಂದಿದ್ದಾರೆ ರವಿಶಾಸ್ತ್ರಿ.

ಇನ್ನು, ಈ ಬಾರಿ ಐಸಿಸಿ ವಿಶ್ವಕಪ್ ತಂಡಕ್ಕೆ ಅಂಬಟಿ ರಾಯುಡು ಮತ್ತು ರಿಷಬ್ ಪಂತ್ ರಲ್ಲಿ ಯಾರಾದರೊಬ್ಬರನ್ನೂ ತಂಡಕ್ಕೆ ಆಯ್ಕೆ ಮಾಡಲು ಸಾಧ್ಯವಾಗುವಂತೆ 16 ಸದಸ್ಯರ ತಂಡ ಆಯ್ಕೆ ಮಾಡಲು ಶಾಸ್ತ್ರಿ ಮನಸ್ಸು ಮಾಡಿದ್ದರಂತೆ. ಆದರೆ ಐಸಿಸಿ ಒಪ್ಪಿಗೆ ನೀಡಲಿಲ್ಲ ಎಂದು ಕೋಚ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಧೋನಿ ಪಡೆಗೆ ಶಾಕ್ ಕೊಟ್ಟ ಹೈದರಾಬಾದ್