ಐಪಿಎಲ್: ಮೊದಲ ಪಂದ್ಯದಲ್ಲೇ ಆರ್ ಸಿಬಿ ಸೋಲಿಗೆ ಕಾರಣರಾಗಿದ್ದು ಯಾರು ಗೊತ್ತಾ?

Webdunia
ಭಾನುವಾರ, 24 ಮಾರ್ಚ್ 2019 (08:54 IST)
ಚೆನ್ನೈ: ಐಪಿಎಲ್ ಕೂಟದ ಉದ್ಘಾಟನಾ ಪಂದ್ಯದಲ್ಲೇ ವಿರಾಟ್  ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಗಳ ಸೋಲನುಭಿಸಿದೆ.


ಸೋಲಿನೊಂದಿಗೇ ಆರ್ ಸಿಬಿ ಅಭಿಯಾನ ಆರಂಭವಾಗಿದೆ. ಆದರೆ ಸೋಲಿನ ಬಳಿಕ ಪಿಚ್ ಗುಣಮಟ್ಟದ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅದೇನೇ ಇದ್ದರೂ ಇಲ್ಲಿ ಧೋನಿ ಜಾಣ ನಾಯಕತ್ವದಿಂದಾಗಿಯೇ ಆರ್ ಸಿಬಿ ಬ್ಯಾಟಿಂಗ್ ವೈಫಲ್ಯ ಕಂಡಿತು ಎಂದರೆ ತಪ್ಪಾಗಲಾರದು. ಮೊದಲ 8 ಓವರ್ ಗಳಲ್ಲೇ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ರನ್ನು ಕಣಕ್ಕಿಳಿಸಿದ ಧೋನಿ ಯಶಸ್ಸು ಕಂಡರು. ಭಜಿ ನಾಲ್ಕು ಓವರ್ ಗಳ ಕೋಟಾದಲ್ಲಿ ಕೇವಲ 20 ರನ್ ಬಿಟ್ಟು ಕೊಟ್ಟು ನಾಯಕ ಕೊಹ್ಲಿ ಸೇರಿದಂತೆ ಪ್ರಮುಖ 3 ವಿಕೆಟ್ ಗಳನ್ನು ಬೇಟೆಯಾಡಿದ್ದರು.

ಇದುವೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಎಷ್ಟೋ ದಿನಗಳ ನಂತರ ಕಣಕ್ಕಿಳದ ಭಜಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾದರು. ಆರ್ ಸಿಬಿ 70 ರನ್ ಗೆ ಆಲೌಟ್ ಆದಾಗಲೇ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಬಳಿಕ ಸಿಎಸ್ ಕೆ ಈ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು 17.4 ಓವರ್ ಗಳಲ್ಲೇ ಗುರಿ ಮುಟ್ಟಿ ಮೊದಲ ಗೆಲುವಿನ ಕೇಕೆ ಹಾಕಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿಶೇಷ ಸಾಮಾರ್ಥ್ಯವುಳ್ಳ ಅಭಿಮಾನಿಯೊಂದಿಗಿನ ನಡೆಗೆ ವಿರಾಟ್, ಅನುಷ್ಕಾಗೆ ಭಾರೀ ಟೀಕೆ

ಐಪಿಎಲ್‌ ಮಿನಿ ಹರಾಜಿನಲ್ಲಿ ಕನ್ನಡಿಗರಿಗೆ ಭಾರೀ ನಿರಾಸೆ: ಆರ್‌ಸಿಬಿಗೆ ಘಟಾನುಘಟಿಗಳ ಎಂಟ್ರಿ

IND vs SA: ಸರಣಿ ಗೆಲ್ಲುವ ಉತ್ಸಾಹದಲ್ಲಿರುವ ಟೀಂ ಇಂಡಿಯಾಗೆ ಕ್ಯಾಪ್ಟನ್, ವೈಸ್ ಕ್ಯಾಪ್ಟನ್ ನದ್ದೇ ಚಿಂತೆ

ಐಪಿಎಲ್ ಹರಾಜು ಯಾಕೆ ಭಾರತದಲ್ಲಿ ನಡೆಯಲ್ಲ: ಪ್ರಿಯಾಂಕ್ ಖರ್ಗೆ ತಕರಾರು

ಆರ್‌ಸಿಬಿ ತವರು ನೆಲದಲ್ಲಿಯೇ ಐಪಿಎಲ್‌ ಉದ್ಘಾಟನಾ ಪಂದ್ಯ

ಮುಂದಿನ ಸುದ್ದಿ
Show comments