ಐಪಿಎಲ್: ಇಂದು, ಚೆನ್ನೈ ವರ್ಸಸ್ ಆರ್ ಸಿಬಿ ಪಂದ್ಯ, ಈ ಸಲ ಕಪ್ ನಮ್ದೇ?!

Webdunia
ಶನಿವಾರ, 23 ಮಾರ್ಚ್ 2019 (09:25 IST)
ಚೆನ್ನೈ: ಈ ವರ್ಷದ ಐಪಿಎಲ್ ಪಂದ್ಯಾವಳಿಗೆ ಇಂದಿನಿಂದ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ಚಾಲನೆ ಸಿಗಲಿದ್ದು, ಈ ಬಾರಿಯಾದರೂ ಕಪ್ ನಮ್ದೇ ಎನ್ನುವುದನ್ನು ನಿಜ ಮಾಡುವ ನಿರೀಕ್ಷೆ ಆರ್ ಸಿಬಿ ಪ್ರೇಕ್ಷಕರದ್ದಾಗಿದೆ.


ಇಂದು ಧೋನಿ ನೇತೃತ್ವದ ಚೆನ್ನೈ ಮತ್ತು ವಿರಾಟ್ ಕೊಹ್ಲಿ ನೇತೃತ್ವದ ಆರ್ ಸಿಬಿ ನಡುವೆ ಮೊದಲ ಪಂದ್ಯ ನಡೆಯಲಿದ್ದು, ಈ ಹೈ ವೋಲ್ಟೇಜ್ ಪಂದ್ಯವನ್ನು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆರ್ ಸಿಬಿಗೆ ನಾಯಕ ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್  ಬಲವಿದ್ದರೆ, ಅತ್ತ ಚೆನ್ನೈಗೆ ಧೋನಿಯೇ ಆಕ್ಸಿಜನ್. ಜತೆಗೆ ಡ್ವಾನ್ ಬ್ರಾವೋ, ಫಾ ಡು ಪ್ಲೆಸಿಸ್, ಸುರೇಶ್ ರೈನಾ ಬಲವಿದೆ.  ಎರಡೂ ತಂಡಗಳ ನಡುವಿನ ಮುಖ್ಯ ವ್ಯತ್ಯಾಸವೆಂದರೆ ಧೋನಿ ಚಾಣಕ್ಷ್ಯ ನಾಯಕತ್ವ.

ಅದನ್ನು ದಾಟಿ ಚಾಂಪಿಯನ್ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ತಂಡವನ್ನು ಈ ಬಾರಿಯಾದರೂ ಗೆಲುವಿನ ದಡ ಮುಟ್ಟಿಸಿ ಕಪ್ ನಮ್ದೇ ಎನ್ನಬೇಕಿದೆ. ಜತೆಗೆ ಇಷ್ಟುವರ್ಷದಿಂದ ನಾಯಕತ್ವ ವಹಿಸಿಯೂ ಕಪ್ ಗೆದ್ದಿಲ್ಲ ಎಂಬ ಟೀಕೆಗಳಿಗೆ ಕೊಹ್ಲಿ ಈ ಕೂಟದಲ್ಲಿ ಉತ್ತರಕೊಡಬೇಕಿದೆ.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ
ಸ್ಥಳ: ಚೆನ್ನೈ
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IND VS SA: ಅಬ್ಬರಿಸಿದ ವಿರಾಟ್ ಕೊಹ್ಲಿ, ಸೌತ್‌ ಆಫ್ರಿಕಾಗೆ ಬಿಗ್‌ ಟಾರ್ಗೇಟ್

ವಿರಾಟ್ ಕೊಹ್ಲಿ ಶತಕಕ್ಕೆ ಎಲ್ಲರಿಗಿಂತ ಹೆಚ್ಚು ಖುಷಿಪಟ್ಟವರು ಯಾರು ನೋಡಿ: Video

IND VS SA: ಕಿಂಗ್ ಕೊಹ್ಲಿ ಶತಕ ಬಾರಿಸುತ್ತಿದ್ದಂತ್ತೆ ಮೈದಾನಕ್ಕೆ ನುಗ್ಗಿದ ಅಭಿಮಾನಿ, ಮಾಡಿದ್ದೇನು ನೋಡಿ Video

IND vs SA Odi:ಮತ್ತೆ ಟಾಸ್‌ ಸೋತ ಟೀಂ ಇಂಡಿಯಾ: ಕನ್ನಡಿಗ ರಾಹುಲ್‌ ನಾಯಕತ್ವಕ್ಕೆ ಸತ್ವಪರೀಕ್ಷೆ

ಮತ್ತೇ ಒಂದಾಗುತ್ತಾರಾ ಪಲಾಶ್‌, ಸ್ಮೃತಿ ಮಂಧಾನ, ಕುತೂಹಲ ಮೂಡಿಸಿದ ಮಂದಾನ, ಪಲಾಶ್‌ ನಡೆ

ಮುಂದಿನ ಸುದ್ದಿ
Show comments