ಇದು ಕನ್ಯೆಯನ್ನು ವಿವಾಹವಾಗುವುದಲ್ಲ.ಕನ್ಯೆಯನ್ನು ಖರೀದಿಸುವ ಪರಿಯಾಗಿದೆ. ಅವರು ನಿಜವಾಗಲೂ ಪರಸ್ಪರ ಪ್ರೀತಿಸಿದ್ದರೆ, ಇಂತಹ ದುಂದುವೆಚ್ಚದ ಅಗತ್ಯವಿರಲಿಲ್ಲ ಎಂದು ಚೀನಾದ ಜನಪ್ರಿಯ ವೈಬೋ ಮೈಕ್ರೋಬ್ಲಾಗ್ ಬಳಕೆದಾರನೊಬ್ಬ ತಿಳಿಸಿದ್ದಾನೆ.
ಚೀನಾದ ಕನ್ಯಾರ್ಥಿಯೊಬ್ಬ ತನ್ನ ಭಾವಿ ವಧುವಿಗೆ ಬರೋಬ್ಬರಿ 8.88 ದಶಲಕ್ಷ ಯಾನ್( 1.5 ದಶಲಕ್ಷ ಡಾಲರ್) ನಗದನ್ನು ಉಡುಗೊರೆಯಾಗಿ ನೀಡುವ ಮೂಲಕ ಸಂಪತ್ತಿನ ಐಷಾರಾಮಿ ಪ್ರದರ್ಶನ ಮಾಡಿದ್ದಾನೆ.
ಸುಮಾರು 18 ಹಮಾಲಿಗಳು ಹಣವನ್ನು ತುಂಬಿದ ಬಾಸ್ಕೆಟ್‌ಗಳು ಮತ್ತು ಪೆಟ್ಟಿಗೆಗಳನ್ನು ಸಾಗಣೆ ಮಾಡಿದ್ದು, ಅವು ಒಟ್ಟು 102 ಕೆಜಿ ತೂಕವನ್ನು ಹೊಂದಿತ್ತು. ಬಿದಿರಿನ ಬಾಸ್ಕೆಟ್‌ಗಳು 100 ಯಾನ್ ನೋಟುಗಳ ಕಟ್ಟುಗಳಿಂದ ತುಂಬಿದ್ದು, ಚೀನಾದ ಸಂಸ್ಥಾಪಕ ಪಿತಾಮಹ ಮಾವೋ ಜೆಡಾಂಗ್ ಚಿತ್ರವನ್ನು ಬಿಂಬಿಸುತ್ತಿದ್ದವು.
ಭಾವಿ ವಧುವಿನ ಮನೆಗೆ ಕನ್ಯಾರ್ಥಿಯ ಪ್ರವಾಸದ ಸಂದರ್ಭದಲ್ಲಿ ಮಸೆರಟ್ಟಿ ಸ್ಪೋರ್ಟ್ ಕಾರಿನ ಸಾರಥ್ಯದಲ್ಲಿ ಐಷಾರಾಮಿ ವಾಹನಗಳು ಹೊರಟವು. ಚೀನಾದಲ್ಲಿ ದಶಕದ ಕಾಲದ ಆರ್ಥಿಕ ಚೇತರಿಕೆಯಿಂದ ಭಾರೀ ಸಂಪತ್ತನ್ನು ಸೃಷ್ಟಿಸಿದೆ. ಆದರೆ ಈ ಕನ್ಯಾರ್ಥಿಯ ಐಷಾರಾಮದ ಪ್ರದರ್ಶನಕ್ಕೆ ಚೀನಾದಲ್ಲಿ ಟೀಕೆಗಳ ಸುರಿಮಳೆ ವ್ಯಕ್ತವಾಗಿದೆ.