ಗೆಳೆತನದ ನೆಪದಲ್ಲಿ ಆರೋಪಿಯೊಂದಿಗೆ ಯುವತಿ ನೆಹರು ಪ್ಲೇಸ್‌ಗೆ ತೆರಳಿದ್ದಾಗ ತಂಪು ಪಾನೀಯದಲ್ಲಿ ಮಾದಕ ದೃವ್ಯ ಬೆರಸಿ ಕುಡಿಸಿ ಎಚ್ಚರ ತಪ್ಪಿದ ನಂತರ ದಕ್ಷಿಣ ದೆಹಲಿಯಲ್ಲಿರುವ ಹೋಟೆಲ್‌ಗೆ ಯುವತಿಯನ್ನು ಕರೆದುಕೊಂಡು ಹೋಗಿ ಆರೋಪಿ ಅತ್ಯಾಚಾರವೆಸಗಿದ್ದಾನೆ ಎಂದು ತನಿಖೆ ನಡೆಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.
22 ವರ್ಷ ವಯಸ್ಸಿನ ಫ್ಯಾಶನ್ ಡಿಜೈನರ್ ವಿದ್ಯಾರ್ಥಿನಿಯ ಮೇಲೆ ಎರಡು ದಿನಗಳ ಹಿಂದೆ ಅತ್ಯಾಚಾರವೆಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ 27 ವರ್ಷ ವಯಸ್ಸಿನ ಕುಮಾರ್ ಎಂಬಾತನನ್ನು ನವದೆಹಲಿಯ ಕರೋಲ್‌ಬಾಗ್‌ನಲ್ಲಿರುವ ನಿವಾಸದಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಯುವತಿಯನ್ನು ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ರೇಪ್‌ಗೊಳಗಾಗಿರುವ ಖಚಿತವಾಗಿದೆ. ತದ ನಂತರವೇ ಆರೋಪಿಯನ್ನು ಬಂಧಿಸಲಾಗಿದೆ.
ಅತ್ಯಾಚಾರವೆಸಗಿದ ಆರೋಪಿ ದೆಹಲಿಯ ಖಾಸಗಿ ಕಂಪೆನಿಯಲ್ಲಿ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದಾನೆ.ಆರೋಪಿಯ ವಿರುದ್ಧ ಅತ್ಯಾಚಾರ , ಅಪಹರಣ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.