ಪತ್ನಿಯರು ಎಷ್ಟೇ ತಡೆದರು ಪತಿಯಂದಿರ ಅಕ್ರಮ ಸಂಬಂಧ ತಡೆಯಲು ಸಾಧ್ಯವಾಗುತ್ತಿಲ್ಲ. ಅಥವಾ ಪತಿಯಂದಿರು ಎಷ್ಟೇ ಪ್ರಯತ್ನ ಪಟ್ಟರು ಪತ್ನಿಯ ಅಫೇರ್‌ಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದೀಗ ಪತ್ನಿಯೊಂದಿಗನ ರಾಸಲೀಲೆಯ ವಿಡಿಯೋವನ್ನು ವೈರಲ್‌ಗೊಳಿಸಿದ ಪತ್ನಿಯ ಪ್ರಿಯಕರನನ್ನು ಹತ್ಯೆಗೈದ ಪತಿ ಪರಾರಿಯಾಗಿದ್ದಾನೆ. ಪೊಲೀಸರು ಆರೋಪಿಯ ಬಂಧನಕ್ಕೆ ಜಾಲ ಬೀಸಿದ್ದಾರೆ.
ಅಕ್ರಮ ಸಂಬಂಧದ ವಿಡಿಯೋ ಹರಿಬಿಟ್ಟ ಕಾರಣಕ್ಕೆ ತಂದೆ, ಮಗನ ಜೋಡಿ ಕೊಲೆ ನಡೆದಿದೆ. ತನ್ನ ಪತ್ನಿಯೊಂದಿಗೆ
ಮಂಜುನಾಥ್ ಅನೈತಿಕ ಸಂಬಂಧ ಹೊಂದಿದ್ದ ಎಂಬ ಸುದ್ದಿ ಕೇಳಿಬಂದ ನಡುವೆಯೇ ಅವರಿಬ್ಬರ ಕಾಮದಾಟದ ವಿಡಿಯೋ ವೈರಲ್ ಆಗಿರೋ ಸುದ್ದಿ ಕೇಳಿ ಗಂಡ ಗರಂ ಆಗಿದ್ದಾನೆ.
ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮಂಜುನಾಥ್ ಹಾಗೂ ಜಗಳ ಬಿಡಿಸಲು ಬಂದ ಮಂಜುನಾಥ್ ನ ತಂದೆಯನ್ನು ಹೊಡೆದು ಕೊಲೆ ಮಾಡಲಾಗಿದೆ. ಕೃಷ್ಣಪ್ಪ ಹಾಗೂ ಆತನ ಸಂಬಂಧಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಕೃಷ್ಣಪ್ಪನ ಪತ್ನಿ ಜೊತೆಗೆ ಮಂಜುನಾಥ್ ಅನೈತಿಕ ಸಂಬಂಧ ಹೊಂದಿದ್ದನು. ಅಷ್ಟೇ ಅಲ್ಲ ಪಲ್ಲಂಗದಾಟದ ವಿಡಿಯೋ ಹರಿಬಿಟ್ಟಿದ್ದ ಎನ್ನಲಾಗಿದೆ.
ಈ ಘಟನೆ ನೆರೆಯ ಮಹಾರಾಷ್ಟ್ರದ ಪುಣೆ ಹತ್ತಿರವಿರುವ ಗ್ರಾಮದಲ್ಲಿ ನಡೆದಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.