ಅಕ್ರಮ ಸಂಬಂಧದಿಂದ ಕಷ್ಟಗಳು ಎದುರಾಗುತ್ತವೆ ಎನ್ನುವುದು ಗೊತ್ತಿದ್ದರೂ ಕೂಡಾ ಕೆಲವರು ಅದನ್ನೇ ಮುಂದುವರಿಸಿಕೊಂಡ ಹೋಗಿರುವವರನ್ನು ನಾವು ನೋಡಿದ್ದೇವೆ. ಕೊನೆಗ ಅದರಲ್ಲಿಯೇ ಜೀವನ ಕಳೆದುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಇತಹ ಘಟನೆ ಇದೀಗ ಮತ್ತೊಮ್ಮೆ ವರದಿಯಾಗಿದೆ.
 
									
			
			 
 			
 
 			
					
			        							
								
																	ರಾತ್ರಿ ಪತಿಯನ್ನು ಬಿಟ್ಟು ಮೈದುನನ ರೂಮಿಗೆ ಸಂಬಂಧ ಬೆಳೆಸಲು ಹೋಗುತ್ತಿದ್ದ ಪತ್ನಿಯನ್ನು ಪತಿಯೊಬ್ಬ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
 
									
										
								
																	
	 
	ಪತ್ನಿಗೆ ಪತಿಯ ಚಿಕ್ಕಪ್ಪನ ಮಗನ ಜೊತೆ ಪ್ರೇಮಾಂಕುರವಾಗಿದ್ದು, ಆತನ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ಬಗ್ಗೆ ಅನುಮಾನವಿದ್ದ ಪತಿಗೆ ಸರಿಯಾದ ಸಾಕ್ಷಿ ಇರದ ಕಾರಣ ಅವರ ಬಣ್ಣ ಬಯಲು ಮಾಡಲು ಆಗಲಿಲ್ಲ.
 
									
											
							                     
							
							
			        							
								
																	
	 
	ಅದಕ್ಕಾಗಿ  ಆತ ಕೊಲೆ ನಡೆದ ದಿನ  ರಾತ್ರಿ ನಿದ್ದೆ ಬಂದಂತೆ ನಾಟಕವಾಡಿದ. ಆಗ ಪತ್ನಿ ಮೈದುನನ ರೂಮಿಗೆ ಹೋಗಿ ಸರಸವಾಡಲು ಶುರುಮಾಡಿದ್ದಾಳೆ. ಆ ವೇಳೆಗೆ ಒಳಗೆ ಬಂದ ಪತಿ ಇಬ್ಬರನ್ನು ರೆಡ್ ಹ್ಯಾಂಡ್ ಆಗಿಹಿಡಿದು ಹಲ್ಲೆ ಮಾಡಿ ಹತ್ಯಗೈದಿದ್ದಾನೆ.