Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್ ನನ್ನ ಡ್ರೆಸ್ ಒಳಗೆ ಕೈ ತೂರಿಸಿದ್ದರು ಎಂದು ಆಪಾದಿಸಿದ ಮಹಿಳೆ

ಡೊನಾಲ್ಡ್ ಟ್ರಂಪ್ ನನ್ನ ಡ್ರೆಸ್ ಒಳಗೆ ಕೈ ತೂರಿಸಿದ್ದರು ಎಂದು ಆಪಾದಿಸಿದ ಮಹಿಳೆ
ನ್ಯೂಯಾರ್ಕ್ , ಶನಿವಾರ, 22 ಜೂನ್ 2019 (10:27 IST)
ನ್ಯೂಯಾರ್ಕ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಿಂದಿನ ರಾಸಲೀಲೆಗಳ ಬಗ್ಗೆ ಆಗಾಗ ಕೆಲವು ಮಹಿಳೆಯರು ಆಪಾದನೆ ಹೊರಿಸುತ್ತಲೇ ಇರುತ್ತಾರೆ. ಈಗ ಲೇಖಕಿಯೊಬ್ಬರು ತಮ್ಮ ಪುಸ್ತಕದಲ್ಲಿ ಹಿಂದೊಮ್ಮೆ ಟ್ರಂಪ್ ತನ್ನ ಜತೆ ಅಸಭ್ಯವಾಗಿ ವರ್ತಿಸಿದ್ದರು ಎಂದು ಆಪಾದನೆ ಮಾಡಿದ್ದಾರೆ.


ಇ ಜೀನ್ ಕೆರೋಲ್ ಎಂಬ ಲೇಖಕಿ ತಮ್ಮ ಹೊಸ ಪುಸ್ತಕದಲ್ಲಿ 1990 ರ ದಶಕದಲ್ಲಿ ಇಂದಿನ ಅಮೆರಿಕಾ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ಶಾಪಿಂಗ್ ಮಾಲ್ ಒಂದರಲ್ಲಿ ಅಸಭ್ಯವಾಗಿ ವರ್ತಿಸಿದ್ದರು. ನನ್ನ ಡ್ರೆಸ್ ಒಳಗೆ ಕೈ ತೂರಿಸಿದ್ದರು ಎಂದು ಆರೋಪಿಸಿದ್ದಾರೆ.

ಆದರೆ ಈ ಆರೋಪವನ್ನು ಅಮೆರಿಕಾ ಅಧ್ಯಕ್ಷರು ನಿರಾಕರಿಸಿದ್ದಾರೆ. ನನಗೆ ಈ ಮಹಿಳೆ ಯಾರು ಎಂದೇ ಗೊತ್ತಿಲ್ಲ. ಆ ಶಾಪ್ ನವರೂ ಯಾವುದೇ ವಿಡಿಯೋ, ಫೋಟೋ ಸಾಕ್ಷ್ಯವಾಗಿ ನೀಡಿಲ್ಲ. ಯಾಕೆಂದರೆ ನೀಡಲು ಅಂತಹದ್ದೊಂದು ಘಟನೆಯೇ ನಡೆದಿರಲಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಹೆಸರಿಗೆ ಮಾತ್ರ ಸರ್ಕಾರ ಇದೆ- ಸಚಿವ ಪ್ರಹ್ಲಾದ್ ಜೋಶಿ ಕಿಡಿ