Select Your Language

Notifications

webdunia
webdunia
webdunia
webdunia

ಮಾಂತ್ರಿಕನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿ ಕೊಂದ ಪತಿ

ಮಾಂತ್ರಿಕನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪದ ಪತ್ನಿ ಕೊಂದ ಪತಿ
ಆಗ್ರಾ , ಮಂಗಳವಾರ, 18 ಜೂನ್ 2019 (12:14 IST)
ಮಾಂತ್ರಿಕನೊಂದಿಗೆ ಪತ್ನಿ ಲೈಂಗಿಕ ಕ್ರಿಯೆಗೆ ಒಪ್ಪದಿದ್ದರಿಂದ ಕೋಪಗೊಂಡ ಪತಿ ಪತ್ನಿಯನ್ನು ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
ಮಾಂತ್ರಿಕ ಸಂತದಾಸ್ ಜಾರ್ಖಂಡಿ ಆರೋಪಿ ಪತಿ ಮಾನ್‌ಪಾಲ್‌ಸಿಂಗ್‌ಗೆ ಒಂದು ವೇಳೆ ನಿನ್ನ ಪತ್ನಿ ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಒಪ್ಪಿದಲ್ಲಿ ನಿಮ್ಮ ಕುಟುಂಬವನ್ನು ಅಗರ್ಭ ಶ್ರೀಮಂತ ಕುಟುಂಬವಾಗಿಸುತ್ತೇನೆ ಎಂದು ಭರವಸೆ ನೀಡಿದ್ದನು ಎನ್ನಲಾಗಿದೆ.
 
ಪತಿ ಮಾನ್ ಸಿಂಗ್ ಮಾಂತ್ರಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸಿದಲ್ಲಿ ಕುಟುಂಬವನ್ನು ಶ್ರೀಮಂತ ಕುಟುಂಬವಾಗಿಸುತ್ತೇನೆ ಎನ್ನುವ ಭರವಸೆ ನೀಡಿದ್ದಾನೆ ಎಂದು ಪತ್ನಿ ತನ್ನ ಸಹೋದರನಿಗೆ ಮಾಹಿತಿ ನೀಡಿದ್ದಳು ಎನ್ನಲಾಗಿದೆ. ಭಾವನಿಗೆ ಮಾಂತ್ರಿಕನಿಂದ ದೂರವಿರುವಂತೆ ಎಚ್ಚರಿಸಿದ್ದನು ಎಂದು ಮೂಲಗಳು ತಿಳಿಸಿವೆ.
 
 ನಿನ್ನೆ ರಾತ್ರಿ ಮಾಂತ್ರಿಕನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತಿ ಮಾನ್‌ಪಾಲ್‌ಸಿಂಗ್ ಪತ್ನಿಗೆ ಒತ್ತಾಯಿಸಿದ್ದಾನೆ. ಆದರೆ, ಆಕೆ ನಿರಾಕರಿಸಿದ್ದರಿಂದ  ಆಕೆಯನ್ನು ಹತ್ಯೆಗೈದು ಗಂಗಾನದಿಗೆ ಎಸೆದು ಪರಾರಿಯಾಗಿದ್ದಾನೆ. ಸಹೋದರಿ ಕಾಣೆಯಾಗಿರುವ ಮಾಹಿತಿ ತಿಳಿದ ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದಾನೆ.
 
ಮೃತಳ ಸಹೋದರ ನೀಡಿದ ದೂರು ಸ್ವೀಕರಿಸಿದ ಪೊಲೀಸರು ಆರೋಪಿ ಮಾಂತ್ರಿಕ ಸಂತದಾಸ್ ಜಾರ್ಖಂಡಿ ಮತ್ತು ಪತಿ ಮಾನ್‌ಪಾಲ್‌ಸಿಂಗ್‌ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಮೃತ ರೈತ ಸುರೇಶ್ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಣೆ ಮಾಡಿದ ಸಿಎಂ