Publish Date: Tue, 18 Jun 2019 (08:46 IST)
Updated Date: Tue, 18 Jun 2019 (08:47 IST)
ಬೆಂಗಳೂರು: ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆ ಕೆಲವೊಮ್ಮೆ ಲೈಂಗಿಕ ಜೀವನಕ್ಕೂ ಅಡ್ಡಿಯಾಗಬಹುದು. ಕೆಟ್ಟ ವಾಸನೆಯೊಂದಿಗೆ ಬಿಳಿ ಸ್ರಾವವಾಗುತ್ತಿದ್ದರೆ ಗುಪ್ತಾಂಗವೂ ಕೆಟ್ಟ ವಾಸನೆ ಹೊಂದಿರುತ್ತದೆ.
ಇದರಿಂದ ಲೈಂಗಿಕ ಕ್ರಿಯೆ ನಡೆಸಲು ಸಂಗಾತಿಗೆ ಇಷ್ಟವಾಗದೇ ಇರಬಹುದು. ಆದರೆ ಈ ಬಿಳಿಮುಟ್ಟು ಅಸಹಜವಾಗಿ ಆಗುತ್ತಿದ್ದರೆ ಏನು ಮಾಡೋದು?
ಗುಪ್ತಾಂಗದಲ್ಲಿ ಸೋಂಕು, ಶುಚಿತ್ವ ಇಲ್ಲದೇ ಇದ್ದಾಗ ಅಧಿಕ ಬಿಳಿಮುಟ್ಟಿನ ಸಮಸ್ಯೆ ಕಂಡುಬರಬಹುದು. ಅಂತಹ ಸಂದರ್ಭದಲ್ಲಿ ಸೋಂಕು ನಿವಾರಣೆಗೆ ತಕ್ಕ ಮದ್ದು ಮಾಡುವುದು ಉತ್ತಮ. ಹಾಗೆಯೇ ಆದಷ್ಟು ಜನನಾಂಗದ ಶುಚಿತ್ವದ ಕಡೆಗೆ ಗಮನಕೊಡಬೇಕು. ತಕ್ಕ ತಜ್ಞ ವೈದ್ಯರನ್ನು ಸಂಪರ್ಕಿಸಿ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.