Publish Date: Thu, 16 Dec 2021 (09:00 IST)
Updated Date: Thu, 16 Dec 2021 (09:17 IST)
ನ್ಯೂಯಾರ್ಕ್: ರೆಸ್ಟೋರೆಂಟ್ ಗೆ ಬರುವ ಗ್ರಾಹಕರು ಸರ್ವರ್ ಗೆ ಕೊನೆಯಲ್ಲಿ ಟಿಪ್ಸ್ ಕೊಡುವುದು ಮಾಮೂಲಿ. ಆದರೆ ಇಲ್ಲೊಬ್ಬ ಮಹಿಳಾ ಸರ್ವರ್ ಹೀಗೇ ಟಿಪ್ಸ್ ರೂಪದಲ್ಲಿ 3 ಲಕ್ಷ ರೂ. ಪಡೆದುಕೊಂಡು ಇದೀಗ ಕೆಲಸದಿಂದ ವಜಾಗೊಂಡಿದ್ದಾಳೆ!
ರೆಸ್ಟೋರೆಂಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸರ್ವರ್ ರಿಯಾನ್ ಬ್ರಾಂಡ್ಟ್ ಎಂಬಾಕೆ ಟಿಪ್ಸ್ ಪಡೆದು ಕೆಲಸ ಕಳೆದುಕೊಂಡಾಕೆ. ಈಕೆ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಗೆ 40 ಕ್ಕೂ ಹೆಚ್ಚು ಜನ ಗ್ರಾಹಕರು ಊಟ ಮಾಡಲು ಬಂದಿದ್ದರು. ಬಳಿಕ ಆಕೆಗೆ ಎಲ್ಲರೂ ಸೇರಿ 4,400 ಅಮೆರಿಕನ್ ಡಾಲರ್ ಅಂದರೆ ಸುಮಾರು 3 ಲಕ್ಷ ರೂ.ಗೂ ಹೆಚ್ಚು ಟಿಪ್ಸ್ ನೀಡಿದ್ದರು.
ಈ ಹಣವನ್ನು ರೆಸ್ಟೋರೆಂಟ್ ಮಾಲಿಕರು ಎಲ್ಲಾ ಸರ್ವರ್ ಗಳೊಂದಿಗೆ ಹಂಚಿಕೊಳ್ಳಲು ಹೇಳಿದರು. ಆದರೆ ರಿಯಾನ್ ಇದು ನನಗೆ ನೀಡಿದ ಟಿಪ್ಸ್ ಎಂದು ಯಾರಿಗೂ ಹಂಚಿಕೊಳ್ಳಲು ನಿರಾಕರಿಸಿದರು. ಇದೇ ಕಾರಣಕ್ಕೆ ಆಕೆಯನ್ನು ಕೆಲಸದಿಂದಲೇ ವಜಾಗೊಳಿಸಲಾಗಿದೆ. ಈ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಆಕೆಯೇ ಹಂಚಿಕೊಂಡಿದ್ದಾರೆ.