Select Your Language

Notifications

webdunia
webdunia
webdunia
webdunia

ಮಂಚದ ಮೇಲೆಯೇ ಪತಿ ಮೃತದೇಹವಿದ್ದರೂ ಆಕೆಗೆ ಗೊತ್ತೇ ಆಗಲಿಲ್ಲ!

ಮಂಚದ ಮೇಲೆಯೇ ಪತಿ ಮೃತದೇಹವಿದ್ದರೂ ಆಕೆಗೆ ಗೊತ್ತೇ ಆಗಲಿಲ್ಲ!
ವಾಷಿಂಗ್ಟನ್ , ಸೋಮವಾರ, 3 ಜನವರಿ 2022 (10:15 IST)
ವಾಷಿಂಗ್ಟನ್: ಪತಿ ಕಾಣೆಯಾಗಿದ್ದಾನೆಂದು ಅಂಧ ಪತ್ನಿಯೊಬ್ಬಳು ಪೊಲೀಸರಿಗೆ ದೂರು ನೀಡಿದ್ದಳು. ಆದರೆ ವಿಪರ್ಯಾಸವೆಂದರೆ ಆತನ ಮೃತದೇಹ ಮನೆಯಲ್ಲಿ ಬೆಡ್ ಮೇಲೆಯೇ ಇತ್ತು! ಆದರೆ ಅಂಧೆಯಾಗಿದ್ದರಿಂದ ಆಕೆಗೆ ಗೊತ್ತೇ ಆಗಿರಲಿಲ್ಲ.

ಇಂತಹದ್ದೊಂದು ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. 76 ವರ್ಷದ ಪತಿ ಗುಂಡಿನ ದಾಳಿಗೊಳಗಾಗಿ ಬೆಡ್ ಮೇಲೇ ಸಾವನ್ನಪ್ಪಿದ್ದ. ಆದರೆ ಅಂಧ ಪತ್ನಿಗೆ ಈ ವಿಚಾರವೇ ತಿಳಿದಿರಲಿಲ್ಲ. ಹೀಗಾಗಿ ಆಕೆ ಪತಿ ನಾಪತ್ತೆಯಾಗಿದ್ದಾನೆಂದು ಪೊಲೀಸರಿಗೆ ದೂರು ನೀಡಿದ್ದಳು.

ಪೊಲೀಸರು ತನಿಖೆ ನಡೆಸಲು ಮನೆಗೆ ಬಂದಾಗ ಮೃತದೇಹ ಬೆಡ್ ಮೇಲೆಯೇ ಇತ್ತು. ಬೆಡ್ ರೂಂನ ಕಿಟಿಕಿ ಗಾಜು ಒಡೆದಿತ್ತು. ಹೀಗಾಗಿ ಗುಂಡಿನ ದಾಳಿಯಾಗಿದೆ ಎನ್ನುವುದು ಸ್ಪಷ್ಟವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಮೊದಲ ರಾತ್ರಿಯೇ ಪತ್ನಿ ಗರ್ಭಿಣಿ ಎಂದರೆ ಗಂಡನಿಗೆ ಹೇಗಾಗಬೇಡ?!