Publish Date: Tue, 14 Apr 2026 (09:35 IST)
Updated Date: Tue, 14 Apr 2026 (09:37 IST)
ನ್ಯೂಯಾರ್ಕ್: ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇರಾನ್ ಮತ್ತು ಅಮೆರಿಕಾ ನಡುವೆ ನಡೆದ ಶಾಂತಿ ಮಾತುಕತೆ ವಿಫಲವಾಗಿದ್ದು ಯಾಕೆ ಎಂದು ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಬಹಿರಂಗಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ನಡೆದ ಶಾಂತಿ ಮಾತುಕತೆ ವಿಫಲವಾಗಿದ್ದು ಎರಡೂ ದೇಶಗಳೂ ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಿಲ್ಲ. ಇದರ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ನಾವು ಇನ್ನು ಇರಾನ್ ನಮ್ಮ ಬಳಿ ಬಂದರೂ ಕೇರ್ ಮಾಡಲ್ಲ ಎಂದಿದ್ದಾರೆ.
ಜೊತೆಗೆ ಮತ್ತೆ ಯುದ್ಧೋನ್ಮಾದದ ಮಾತನಾಡುತ್ತಿದ್ದಾರೆ. ಇದರ ನಡುವೆ ಜೆಡಿ ವ್ಯಾನ್ಸ್ ಮಾತುಕತೆ ವಿಫಲವಾಗಿದ್ದು ಯಾಕೆ ಎಂಬುದಕ್ಕೆ ಕಾರಣ ವಿವರಿಸಿದ್ದಾರೆ. ಪಾಕಿಸ್ತಾನಕ್ಕೆ ಬಂದಿದ್ದ ಇರಾನ್ ಜೊತೆಗೆ ನಮ್ಮ ಮಾತುಕತೆ ಸಕಾರಾತ್ಮಕವಾಗಿಯೇ ಇತ್ತು.
ಆದರೆ ಅಲ್ಲಿಗೆ ಬಂದಿದ್ದ ಇರಾನ್ ಪ್ರತಿನಿಧಿಗಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವೇ ಇರಲಿಲ್ಲ.ಅಲ್ಲಿಗೆ ಇರಾನ್ ಪ್ರತಿನಿಧಿಸಲು ಇಬ್ಬರು ಸಚಿವರು ಬಂದಿದ್ದರು. ಆದರೆ ಅವರು ಅಂತಿಮ ನಿರ್ಧಾರಕ್ಕೆ ಬರುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ ನಾವೂ ಈ ಮಾತುಕತೆಯಿಂದ ಪ್ರಯೋಜನವಾಗದು ಎಂದು ಬಿಟ್ಟು ಬಂದ್ವಿ ಎಂದು ಜೆಡಿ ವ್ಯಾನ್ಸ್ ಹೇಳಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ