Select Your Language

Notifications

webdunia
webdunia
webdunia
webdunia

ಇನ್ನು ನೀವಾಗೇ ಬಂದ್ರೂ ಕೇರ್ ಮಾಡಲ್ಲ ಎಂದ ಟ್ರಂಪ್ ಇರಾನ್ ಮೇಲೆ ಮತ್ತೆ ಯುದ್ಧ ಮಾಡ್ತಾರಾ

Donald Trump
ನ್ಯೂಯಾರ್ಕ್: ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಇನ್ನು ನೀವಾಗಿಯೇ ಬಂದ್ರೂ ಕೇರ್ ಮಾಡಲ್ಲ ಎಂದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಇರಾನ್ ವಿರುದ್ಧ ಯುದ್ಧ ಮಾಡ್ತಾರಾ ಎಂಬ ಅನುಮಾನ ಶುರುವಾಗಿದೆ.

ಸದ್ಯಕ್ಕೆ ಇರಾನ್ ಮತ್ತು ಅಮೆರಿಕಾ ನಡುವೆ 15 ದಿನಗಳ ಕದನ ವಿರಾಮವಾಗಿದೆ. ಈ ಸಮಯದಲ್ಲಿ ಅಮೆರಿಕಾ ಯುದ್ಧ ಮಾಡುವ ಸಾಧ್ಯತೆ ಕಡಿಮೆ. ಆದರೆ ಕದನ ವಿರಾಮ ಮುಗಿದ ಬಳಿಕ ಅಮೆರಿಕಾ ಮತ್ತೆ ಯುದ್ಧ ಆರಂಭಿಸಿದರೂ ಅಚ್ಚರಿಯಿಲ್ಲ ಎನ್ನುತ್ತಿದೆ ಮೂಲಗಳು.

ಪಾಕಿಸ್ತಾನದಲ್ಲಿ ಇರಾನ್ ಮತ್ತು ಯುಎಸ್ಎ ಪ್ರತಿನಿಧಿಗಳು ಶಾಂತಿ ಮಾತುಕತೆ ನಡೆಸಿದರೂ ಅದರಿಂದ ಸಕಾರತ್ಮಕ ಫಲಿತಾಂಶ ಬಂದಿಲ್ಲ. ಪರಮಾಣು ಶಸ್ತ್ರಾಸ್ತ್ರ ನಿರ್ಮಿಸಬಾರದು ಎಂಬ ಅಮೆರಿಕಾ ಷರತ್ತಿಗೆ ಇರಾನ್ ಬಿಲ್ ಕುಲ್ ಒಪ್ಪಿಲ್ಲ.

ಇದರ ಬೆನ್ನಲ್ಲೇ ಹೊರ್ಮುಜ್ ಜಲಸಂಧಿಯನ್ನು ನಮ್ಮ ವಶಕ್ಕೆ ಪಡೆದೇ ತೀರುತ್ತೇವೆ ಎಂದು ಟ್ರಂಪ್ ಪಣ ತೊಟ್ಟಿದ್ದಾರೆ. ತನ್ನ ಸೈನಿಕರನ್ನು ಅಮೆರಿಕಾ ಸದ್ಯಕ್ಕೆ ಹಿಂಪಡೆಯಲ್ಲ ಎಂದಿರುವುದು ಯುದ್ಧದ ಮುನ್ಸೂಚನೆ ಎಂದೇ ಹೇಳಲಾಗಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಇಡೀ ಜಗತ್ತು ಸಂಕಷ್ಟಕ್ಕೆ ಸಿಲುಕಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯ ಕಾಂಗ್ರೆಸ್ ನಲ್ಲಿ ಈ ಮಹತ್ವದ ಬದಲಾವಣೆ ಖಚಿತ