Publish Date: Sun, 12 Apr 2026 (12:29 IST)
Updated Date: Sun, 12 Apr 2026 (12:32 IST)
ಇಸ್ಲಾಮಾಬಾದ್: ಕದನ ವಿರಾಮದ ಬಳಿಕ ಪಾಕಿಸ್ತಾನದಲ್ಲಿ ಇರಾನ್ ಮತ್ತು ಅಮೆರಿಕಾ ಪ್ರತಿನಿಧಿಗಳು ನಡೆಸಿದ ಶಾಂತಿ ಮಾತುಕತೆ ವಿಫಲವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇರಾನ್, ಅಸಮಂಜಸ ಬೇಡಿಕೆ ಮುಂದಿಟ್ಟಿದ್ದರು, ಮಾತುಕತೆ ವಿಫಲಕ್ಕೆ ಅಮೆರಿಕಾವೇ ಕಾರಣ ಎಂದಿದೆ.
ಇದಕ್ಕೆ ಮೊದಲು ಪತ್ರಿಕಾಗೋಷ್ಠಿ ನಡೆಸಿದ್ದ ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ನಾವು ಒಮ್ಮತದ ಒಪ್ಪಂದಕ್ಕಾಗಿ ಸಾಕಷ್ಟು ಪ್ರಯತ್ನ ನಡೆಸಿದೆವು. ಆದರೆ ನಮ್ಮ ಷರತ್ತುಗಳನ್ನು ಇರಾನ್ ಒಪ್ಪಿಲ್ಲ. ಹೀಗಾಗಿ ಮಾತುಕತೆ ವಿಫಲವಾಗಿದೆ ಎಂದಿದ್ದರು.
ಇದಕ್ಕೀಗ ಇರಾನ್ ಪ್ರತಿಕ್ರಿಯೆ ನೀಡಿದೆ. ಮಾತುಕತೆ ವಿಫಲವಾಗಲು ಅಮೆರಿಕಾವೇ ಕಾರಣ ಎಂದಿದೆ. ಕೆಲವು ಅಸಮಂಜಸ ಬೇಡಿಕೆಗಳನ್ನು ಅಮೆರಿಕಾ ಮುಂದಿಡುತ್ತಿದೆ. ಒಂದೇ ಅವಧಿಗೆ ಮಾತುಕತೆ ಒಪ್ಪಂದಕ್ಕೆ ಬರುತ್ತೇವೆ ಎಂದು ನಿರೀಕ್ಷಿಸುವುದು ತಪ್ಪಾಗುತ್ತದೆ ಎಂದು ಇರಾನ್ ಸಚಿವಾಲಯದ ವಕ್ತಾರ ಇಸ್ಮಾಯಿಲ್ ಬಕೈ ಹೇಳಿದ್ದಾರೆ.
ಇದಕ್ಕೆ ಮೊದಲು ಮಾತನಾಡಿದ್ದ ಜೆಡಿ ವ್ಯಾನ್ಸ್, ಮಾತುಕತೆ ಫಲ ಏನೇ ಇರಲಿ, ಮಿಲಿಟರಿ ಕಾರ್ಯಾಚರಣೆಯಲ್ಲಿ ನಾವೇ ಗೆದ್ದಿದ್ದೇವೆ ಎಂದಿದ್ದರು. ಇರಾನ್ ಗೆ ಮುಂದಿನ ದಿನಗಳಲ್ಲಿ ಪರಮಾಣು ಶಸ್ತ್ರಾಸ್ತ್ರ ನಿರ್ಮಿಸಬಾರದು ಎಂದು ಅಮೆರಿಕಾ ಪ್ರಮುಖವಾಗಿ ಷರತ್ತು ವಿಧಿಸಿದೆ. ಆದರೆ ಇದಕ್ಕೆ ಇರಾನ್ ಒಪ್ಪುತ್ತಿಲ್ಲ ಎನ್ನಲಾಗಿದೆ.