ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೇರಿಕಾ ಹೌಸ್ ಆಫ್ ರೆಪ್ರೆಸೆಂಟೇಟಿವ್  ನಲ್ಲಿ ಮಾಡಿದ ಭಾಷಣದ ಪ್ರತಿಗಳನ್ನು ಸ್ಪೀಕರ್ ನ್ಯಾನ್ಸಿ ಪೆಲೋಸಿ  ಹರಿದು ಹಾಕಿದ್ದಾರೆ.
									
										
								
																	
ಉಕ್ರೈನ್ ಸರ್ಕಾರದ ಮೂಲಕ ಜಾಯ್ ಬಿಡೆನ್ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ ಎಂದ ಆರೋಪ ಹೊತ್ತುಕೊಂಡ ನಂತರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರದಂದು ಅಮೇರಿಕಾ ಹೌಸ್ ಆಫ್ ರೆಪ್ರೆಸೆಂಟೇಟಿವ್  ನಲ್ಲಿ ಮೊದಲ ಬಾರಿಗೆ ಭಾಷಣ ಮಾಡಿದ್ದಾರೆ.
									
			
			 
 			
 
 			
			                     
							
							
			        							
								
																	
ಭಾಷಣ ಮುಗಿದ ಬಳಿಕ ಸ್ಪೀಕರ್ ನ್ಯಾನ್ಸಿ ಪೆಲೋಸಿ  ಅಧ್ಯಕ್ಷರ ಕೈಕುಲುಕಲು  ತಮ್ಮ ಕೈ ಮುಂದೆ ಚಾಚಿದಾಗ ಡೊನಾಲ್ಡ್ ಟ್ರಂಪ್ ಅವರು ಇದಕ್ಕೆ ಪ್ರತಿಕ್ರಿಯಿಸಲಿಲ್ಲ. ಇದರಿಂದ ಆಕ್ರೋಶಗೊಂಡ ಸ್ಪೀಕರ್ ಭಾಷಣದ ಪ್ರತಿಗಳನ್ನು ಹರಿದು ಹಾಕಿದ್ದಾರೆ. ಇದಕ್ಕೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.