Publish Date: Wed, 15 Jan 2020 (06:51 IST)
Updated Date: Wed, 15 Jan 2020 (06:52 IST)
ಹೈದರಾಬಾದ್ : ಹೈದರಾಬಾದ್ ನ 5 ವರ್ಷದ ಬಾಲಕನೊಬ್ಬ ಒಂದು ಗಂಟೆಯೊಳಗೆ ಸತತವಾಗಿ 1200 ಬಸ್ಕಿ ಹೊಡೆದು ಗಿನ್ನಿಸ್ ದಾಖಲೆ ಮಾಡಿದ್ದಾನೆ.
ಅಶ್ಮಾನ್ ತನೇಜಾ ಗಿನ್ನಿಸ್ ದಾಖಲೆ ಮಾಡಿದ ಬಾಲಕ. ಈತ ಅಮೇರಿಕಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವೇಳೆ ಒಂದು ಗಂಟೆಯೊಳಗೆ ನಿರಂತರವಾಗಿ 1200 ಬಸ್ಕಿ ಹೊಡೆದು ಎಲ್ಲರ ಮೆಚ್ಚುಗೆಗೆ ಪಾತ್ರನಾಗಿ ವಿಶ್ವ ದಾಖಲೆಯ ಪುಟ ಸೇರಿದ್ದಾನೆ.
ಇವನಿಗೆ ಈ ಕಾರ್ಯಕ್ಕೆ ಆತನ ಅಕ್ಕನೇ ಸ್ಫೂರ್ತಿಯಾಗಿದ್ದು, ಆಕೆ ಈಗಾಗಲೇ 2 ವಿಶ್ವ ದಾಖಲೆಗಳನ್ನು ಮಾಡಿದ್ದಾಳಂತೆ. ಆಕೆಯಂತೆ ತಾನೂ ಏನಾದರೂ ಸಾಧಿಸಬೇಕೆಂದುಕೊಂಡ ಈತ ಇದೀಗ ಬಸ್ಕಿ ಹೊಡೆಯುವುದರ ಮೂಲಕ ವಿಶ್ವ ದಾಖಲೆ ಮಾಡಿದ್ದಾನೆ.