ಮಾಜಿ ಪ್ರಿಯಕರನನ್ನು ಮೆಚ್ಚಿಸಲು ಯುವತಿ ನೀಡಿದ ಗಿಪ್ಟ್ ಏನೆಂದು ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ

ಮಂಗಳವಾರ, 30 ಅಕ್ಟೋಬರ್ 2018 (07:18 IST)
ಮೆಕ್ಸಿಕೊ : ಪ್ರೀತಿಗಾಗಿ ಹುಡುಗ –ಹುಡುಗಿಯರು ಒಬ್ಬರನೊಬ್ಬರು ಮೆಚ್ಚಿಸಲು ದುಬಾರಿಯಾದ, ಅವರಿಗೆ ಇಷ್ಟವಾದ  ಉಡುಗೊರೆಯನ್ನು ನೀಡುವುದನ್ನು ನಾವು ಕೇಳಿರುತ್ತೇವೆ. ಆದರೆ ಮೆಕ್ಸಿಕೋದ ಯುವತಿಯೊಬ್ಬಳು ತನ್ನ ಮಾಜಿ ಬಾಯ್‌ಫ್ರೆಂಡ್‌ ಅನ್ನು ಮೆಚ್ಚಿಸಲು ನೀಡಿದ ಉಡುಗೊರೆ ಏನು ಎಂಬುದನ್ನು ಕೇಳಿದರೆ  ನೀವೇ ಬೆಚ್ಚಿ ಬೀಳ್ತೀರಾ.


ಹೌದು. ಮೆಕ್ಸಿಕೋದ ಜಲಿಸ್ಕೋದ ಯುವತಿ ಪೌಲಿನಾ ಕ್ಯಾಸಿಲಾಸ್ ಲ್ಯಾಂಡೆರೋಸ್ ತನ್ನ ಮಾಜಿ ಪ್ರಿಯಕರ ಡೇನಿಯಲ್ ರಮಿರೇಝ್‌ ನನ್ನು ಮೆಚ್ಚಿಸಲು ವಿಚಿತ್ರವಾದ ಉಡುಗೊರೆಯೊಂದನ್ನು ಆತನಿಗೆ  ನೀಡಿದ್ದಾಳೆ.


ಈಕೆ ದೇಹ ಮಾರ್ಪಾಡು ಮಾಡಿಕೊಳ್ಳುವುದಕ್ಕಾಗಿ ಅನೇಕ ಬಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಕೊಂಡಿದ್ದಳು. ಇಂತಹ ಹುಚ್ಚಿರುವ ಈಕೆ ತನ್ನ ಮಾಜಿ ಪ್ರಿಯಕರನನ್ನು ಮೆಚ್ಚಿಸಲು ತನ್ನ ಹೊಕ್ಕುಳನ್ನೇ ಕತ್ತರಿಸಿ ಉಡುಗೊರೆಯಾಗಿ ನೀಡಿದ್ದಾಳಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಚಾರಕ್ಕೆ ತೆರಳಿ ಪೇಚಿಗೆ ಸಿಲುಕಿದ ನಟಿ ಪೂಜಾಗಾಂಧಿ