Publish Date: Fri, 06 Nov 2020 (09:30 IST)
Updated Date: Fri, 06 Nov 2020 (09:32 IST)
ಯುಲಿನ್ : ಲೈಂಗಿಕ ಕಿರುಕುಳ ನೀಡುತ್ತಿದ್ದ ಹಿನ್ನಲೆಯಲ್ಲಿ 25 ವರ್ಷದ ಚೀನಾದ ನರ್ಸ್ ಒಬ್ಬರು ವೈದ್ಯನನ್ನು ಕೊಂದು ಅವನ ದೇಹವನ್ನು ಪೀಸ್ ಮಾಡಿ ಬೇಯಿಸಿ ಶೌಚಾಲಯಕ್ಕೆ ಹಾಕಿದ ಭಯಾನಕ ಘಟನೆ ಗುವಾಂಗ್ ಪ್ರದೇಶದ ಯುಲಿನ್ ನಲ್ಲಿ ನಡೆದಿದೆ.
ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನರ್ಸ್ ಒಬ್ಬಳು ಆಸ್ಪತ್ರೆಯ ವೈದ್ಯನ ಬಳಿ ಹಣ ಪಡೆದಿದ್ದಳು. ಆದರೆ ಆತ ಈ ಹಣಕ್ಕೆ ಪ್ರತಿಯಾಗಿ ತನ್ನ ಬಳಿ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ನರ್ಸ್ ತನ್ನ ಮನೆಗೆ ಆತನನ್ನು ಕರೆದು ಆತನನ್ನು ಕೊಲೆ ಮಾಡಿ ದೇಹವನ್ನು ತುಂಡುತುಂಡಾಗಿ ಮಾಡಿ ಬೇಯಿಸಿ ಶೌಚಾಲಯಕ್ಕೆ ಸುರಿದಿದ್ದಾಳೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ನರ್ಸ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ಇದೀಗ ನ್ಯಾಯಾಲಯ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿದೆ ಎನ್ನಲಾಗಿದೆ.