Select Your Language

Notifications

webdunia
webdunia
webdunia
webdunia

ವಿಜಯ್ ಮಲ್ಯ ಗಡಿಪಾರು ಕೇಸ್; ತೀರ್ಪು ಪ್ರಕಟಿಸಿದ ಲಂಡನ್ ಕೋರ್ಟ್

ವಿಜಯ್ ಮಲ್ಯ ಗಡಿಪಾರು ಕೇಸ್; ತೀರ್ಪು ಪ್ರಕಟಿಸಿದ ಲಂಡನ್ ಕೋರ್ಟ್
ಲಂಡನ್ , ಮಂಗಳವಾರ, 11 ಡಿಸೆಂಬರ್ 2018 (07:56 IST)
ಲಂಡನ್ : ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ಲಂಡನ್ ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯ ಗಡಿಪಾರು ಕುರಿತು ಲಂಡನ್ ಕೋರ್ಟ್ ಸೋಮವಾರ ತೀರ್ಪು ಪ್ರಕಟ ಮಾಡಿದೆ.


ಉದ್ಯಮಿ ವಿಜಯ್ ಮಲ್ಯ  ಭಾರತದ ಬ್ಯಾಂಕ್ ಗಳಿಂದ ಸಾಲ ಪಡೆದು ಅದನ್ನು ಮರುಪಾವತಿ ಮಾಡದೆ ಲಂಡನ್ ಗೆ ಪಲಾಯಾನ ಮಾಡಿದ್ದರು. ಮಲ್ಯ ಅವರನ್ನು ಹಸ್ತಾಂತರಿಸುವಂತೆ ಭಾರತದ ತನಿಖಾ ಸಂಸ್ಥೆಗಳು ಲಂಡನ್‌ನ ವೆಸ್ಟ್‌ ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ಕೋರ್ಟ್ ಇದೀಗ ತೀರ್ಪನ್ನು ಪ್ರಕಟಿಸಿದ್ದು, ಭಾರತಕ್ಕೆ ಮಲ್ಯ ಅವರನ್ನು ಗಡಿಪಾರು ಮಾಡುವಂತೆ ತೀರ್ಪು ನೀಡಿದೆ.


ಇನ್ನು ತೀರ್ಪು ಪ್ರಕಟವಾಗುತ್ತಿದ್ದ ಬೆನ್ನಲೇ  ನ್ಯಾಯಾಲಯದ ಗಡಿಪಾರು ತೀರ್ಪುನ್ನು ಪ್ರಶ್ನಿಸಿ ವಿಜಯ್ ಮಲ್ಯ ಲಂಡನ್ ಹೈ ಕೋರ್ಟ್ ಗೆ ಮೇಲ್ನನವಿ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಗಡಿಪಾರು ಆದೇಶ ಪ್ರಶ್ನಿಸಿ ಮಲ್ಯ ಪರವಾಗಿ ಹೈಕೋರ್ಟ್​ಗೆ ಮೇಲ್ಮನವಿ ಅರ್ಜಿ ಸಲ್ಲಿಕೆಯಾಗದಿದ್ದರೆ 28 ದಿನಗಳ ಒಳಗೆ ಮಲ್ಯ ಬ್ರಿಟನ್ ತೊರೆಯಬೇಕಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್ ಬಿಐನ ಗವರ್ನರ್ ಹಾಗೂ ಉಪ ಗವರ್ನರ್