Publish Date: Wed, 14 Nov 2018 (15:31 IST)
Updated Date: Wed, 14 Nov 2018 (15:41 IST)
ಬೆಂಗಳೂರು : ಹಿಂದಿನ ಕಾಲದಲ್ಲಿ ಮಹಿಳೆಯರು ಕೈಗಳಿಗೆ ಬಳೆಗಳನ್ನು ಧರಿಸುತ್ತಿದ್ದರು. ಆದರೆ ಈ ಕಾಲದಲ್ಲಿ ಮಹಿಳೆಯರು ಬಳೆ ಧರಿಸುವುದೇ ಅಪರೂಪವಾಗಿದೆ. ಹಬ್ಬ ಹರಿದಿನಗಳು, ಸಭೆಸಮಾರಂಭಗಳಿಗೆ ಹೋಗುವಾಗ ಮಾತ್ರ ಧರಿಸುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಮಹಿಳೆಯರು ಬಳೆ ಧರಿಸುವುದರಿಂದ ಜೀವನದಲ್ಲಿ ಸುಖ ಶಾಂತಿ ಲಭಿಸುತ್ತದೆಯಂತೆ.
ಹೌದು. ಬಳೆಗಳಿಗೆ ಶುಕ್ರ ಹಾಗೂ ಚಂದ್ರನ ಜೊತೆ ನೇರವಾದ ಸಂಬಂಧವಿದೆಯಂತೆ. ಚಂದ್ರ ನಮ್ಮ ಸುಖ, ಸಂತೋಷಗಳಿಗೆ ಕಾರಕನಾಗಿರುತ್ತಾನೆ. ಇದರಿಂದ ಮಹಿಳೆಯರು ವಿಶೇಷ ದಿನಗಳಲ್ಲಿ ಮಾತ್ರ ಬಳೆಗಳನ್ನು ಧರಿಸಿದರೆ ಭಾಗಶಃ ಸುಖ ಸಂತೋಷ ಲಭಿಸುತ್ತದೆಯಂತೆ. ಆದ್ದರಿಂದ ಮಹಿಳೆಯರು ಎಲ್ಲ ದಿನಗಳಲ್ಲಿ ಆಗದಿದ್ದರೆ ವಾರದಲ್ಲಿ 2 ದಿನ ಅಂದರೆ ಸೋಮವಾರ ಹಾಗೂ ಬುಧವಾರ ತಪ್ಪದೇ ಬಳೆಗಳನ್ನು ಧರಿಸಿದರೆ ಚಂದ್ರನ ಅನುಗ್ರಹ ಪಡೆದು ಸುಖ ಶಾಂತಿ ಲಭಿಸುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.