ಕ್ಯಾಬ್ ಡ್ರೈವರ್ ಎಲ್ಲರೂ ಕೆಟ್ಟವರಲ್ಲ ಎಂಬುದಕ್ಕೆ ಈ ಘಟನೆಯೇ ಮುಖ್ಯ ಸಾಕ್ಷಿ

ಗುರುವಾರ, 8 ಆಗಸ್ಟ್ 2019 (09:20 IST)
ಲಂಡನ್ : ಕ್ಯಾಬ್ ಡ್ರೈವರ್ ಗಳ ಜೊತೆ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ಜನರು ಭಾವಿಸಿರುವಾಗ ಉಬರ್ ಕ್ಯಾಬ್ ಡ್ರೈವರ್ ಒಬ್ಬ ತನ್ನ ಮಹಿಳಾ ಪ್ರಯಾಣಿಕಳನ್ನು ಆಕೆಯ ಕ್ರೂರ ಗೆಳೆಯನಿಂದ ರಕ್ಷಿಸಿದ ಘಟನೆ ಯುಕೆಯಲ್ಲಿ ನಡೆದಿದೆ.
ಗರೆಥ್ ಗೇಲ್ ಎಂಬಾತ ಮಹಿಳೆಯನ್ನು ಕಾಪಾಡಿದ ಉಬರ್ ಚಾಲಕ. ಈತನಿಗೆ ಒಮ್ಮೆ ಒಬ್ಬ ಮಹಿಳೆಯನ್ನು ಪಿಕ್‌ ಅಪ್ ಮಾಡುವಂತೆ ಒಂದು ಕರೆ ಬಂತು. ಬಳಿಕ ಸ್ವಲ್ಪ ಸಮಯದ ನಂತರ ಆತ ಪಿಕ್ ಅಪ್ ಮಾಡಬೇಕಾಗಿದ್ದ ಮಹಿಳೆ,  ನೀವು ಇಲ್ಲಿಗೆ ಬಂದಾಗ ನನ್ನ ಗೆಳೆಯನಂತೆ ನಟಿಸಬಹುದೇ? ಎಂದು ಮೆಸೇಜ್ ಕಳುಹಿಸಿದ್ದಾಳೆ.


ತಕ್ಷಣ ಎಚ್ಚೆತ್ತ ಉಬರ್ ಚಾಲಕ ಗೇಲ್ ಸ್ಥಳಕ್ಕೆ ಹೋದಾಗ ಅಲ್ಲಿ ಒಬ್ಬ ಮಹಿಳೆ ಹಾಗೂ ಪುರುಷನಿದ್ದ, ಆಗ ಆ ಮಹಿಳೆ ಚಾಲಕನನ್ನು ತನ್ನ ಗೆಳೆಯನ ರೀತಿ ಮಾತನಾಡಿಸಿ ಕಾರ್ ಹತ್ತಿದ್ದಾಳೆ. ನಂತರ ಆಕೆ ಚಾಲಕನ ಬಳಿ ತಾನು ತನ್ನ ಕ್ರೂರಿ ಗೆಳೆಯನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿರುವುದಾಗಿ ಹೇಳಿ ಚಾಲಕನಿಗೆ ಧನ್ಯವಾದ ತಿಳಿಸಿದ್ದಾಳೆ. ಬಳಿಕ ಚಾಲಕ ಆಕೆಯನ್ನ ತಲುಪಬೇಕಾದ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾನೆ.


ಈ ವಿಚಾರವನ್ನು ಸ್ವತಃ ಉಬರ್ ಚಾಲಕ ಗೇಲ್ ತನ್ನ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾನೆ. ಆ ಮೂಲಕ ಕ್ಯಾಬ್ ಡ್ರೈವರ್ ಎಲ್ಲರೂ ಕೆಟ್ಟವರಲ್ಲ ಎಂಬುದನ್ನು ಚಾಲಕ ಗೇಲ್ ನಿರೂಪಿಸಿದ್ದಾನೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ವಾಲಂ ಪ್ರೊಸೆಸರ್ ಬಳಸುತ್ತಿರುವ ಈ ಆಂಡ್ರಾಯ್ಡ್ ಸ್ಮಾರ್ಟ್‌ ಫೋನ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್