Select Your Language

Notifications

webdunia
webdunia
webdunia
webdunia

ಪೋಷಕರು ಬೈಕ್ ಖರೀದಿ ಬೇಡ ಎಂದಿದ್ದಕ್ಕೆ ವಾಸವಿದ್ದ ಮನೆಯನ್ನೇ ಮಾರಿದ ಮಗ!

ಪೋಷಕರು ಬೈಕ್ ಖರೀದಿ ಬೇಡ ಎಂದಿದ್ದಕ್ಕೆ ವಾಸವಿದ್ದ ಮನೆಯನ್ನೇ ಮಾರಿದ ಮಗ!
ಬೀಜಿಂಗ್ , ಸೋಮವಾರ, 14 ಆಗಸ್ಟ್ 2023 (14:13 IST)
ಬೀಜಿಂಗ್ : ಪೋಷಕರು ಬೈಕ್ ಖರೀದಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ 18 ವಯಸ್ಸಿನ ಹುಡುಗ ಮನೆಯನ್ನೇ ಮಾರಾಟ ಮಾಡಿರುವ ಘಟನೆ ಚೀನಾದಲ್ಲಿ ನಡೆದಿದೆ.

ಸುಮಾರು 1.15 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾನೆ. ಈತನಿಗೆ ಇನ್ನೂ 18 ವರ್ಷ ವಯಸ್ಸಾಗಿರುವುದರಿಂದ ಕುಟುಂಬದ ಕಾನೂನು ಕ್ರಮವು ಮಾರಾಟವನ್ನು ರದ್ದುಗೊಳಿಸಿದೆ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ಮುಂದೆ ವಿಷಯ ಮಂಡಿಸಿದ ನಂತರ ಬೆಳಕಿಗೆ ಬಂದಿದೆ.

ಪೋಷಕರು ಬೈಕ್ ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜ್ಜನಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಲು ಹುಡುಗ ನಿರ್ಧರಿಸಿದ್ದ. ಪೋಷಕರಿಗೆ ತಿಳಿಸದೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿದ್ದ. ಹುಡುಗ ಮತ್ತು ಇಬ್ಬರು ಆಸ್ತಿ ವಿತರಕರ ನಡುವಿನ ಒಪ್ಪಂದದ ಪೇಪರ್ಗಳನ್ನು ನ್ಯಾಯಾಲಯವು ಪರಿಶೀಲಿಸಿತು. ಇದು ಒಪ್ಪತಕ್ಕದ್ದಲ್ಲ ಎಂದು ಕೋರ್ಟ್ ಹೇಳಿತು.

ಹುಡುಗ 59 ಲಕ್ಷಕ್ಕೆ ಮನೆಯನ್ನು ಮಾರಿದ್ದ. ಅದನ್ನು ಖರೀದಿದ್ದ ಏಜೆಂಟ್ ಲಾಭಕ್ಕಾಗಿ ಹೆಚ್ಚಿನ ಮೊತ್ತಕ್ಕೆ ಮಾರಾಟ ಮಾಡಿದ್ದ. ಈ ವಿಚಾರ ತಿಳಿದ ಹುಡುಗನ ತಾಯಿ, ಆಸ್ತಿ ಏಜೆಂಟ್ನ್ನು ಸಂಪರ್ಕಿಸಿ ಒಪ್ಪಂದವನ್ನು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಅದಕ್ಕೆ ಏಜೆಂಟ್ ನಿರಾಕರಿಸಿದಾಗ, ಪೋಷಕರು ಕಾನೂನು ಮಾರ್ಗ ಹಿಡಿದರು.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಉಪೇಂದ್ರ ನಿವಾಸದಲ್ಲಿ ಇಲ್ಲ,ಅವರ ಹೇಳಿಕೆ ನೋವುಂಟು ಮಾಡಿದೆ- ಗೋಪಾಲ ಗಿರಿಯಪ್ಪ