Select Your Language

Notifications

webdunia
webdunia
webdunia
Saturday, 12 April 2025
webdunia

ಯುವಕರೇ ವೀಲ್ಹಿಂಗ್ ಮಾಡುವ ಮುನ್ನ ಎಚ್ಚರ..! ವೀಲ್ಹಿಂಗ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ

ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ , ಬುಧವಾರ, 9 ಆಗಸ್ಟ್ 2023 (08:58 IST)
ಚಿಕ್ಕಬಳ್ಳಾಪುರ : ಸಿನಿಮೀಯ ಶೈಲಿಯಲ್ಲಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದಾಗ ನಿಯಂತ್ರಣ ಕಳೆದುಕೊಂಡ ಪರಿಣಾಮ ಅಪಘಾತಕ್ಕೀಡಾಗಿ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವುಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ. ಇದೀಗ ಆತ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಅಪ್ರೋಜ್ ಪಾಷಾ (16) ಮೃತ ವಿದ್ಯಾರ್ಥಿ.
 
ಮೈಲಾಂಡಹಳ್ಳಿ ಗ್ರಾಮದ 18 ವರ್ಷದ ತಾಜ್ ಉಲ್ಲಾ ಷರೀಪ್ ಹಾಗೂ ಅಪ್ರೋಜ್ ಪಾಷಾ ಇತ್ತೀಚೆಗೆ ಕುರುಟಹಳ್ಳಿ ಗ್ರಾಮದ ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡಿದ್ದರು. ಬೈಕ್ ಚಾಲನೆ ಮಾಡುತ್ತಿದ್ದ ತಾಜ್ ಉಲ್ಲಾ ಷರೀಪ್ ಪ್ರಾಣದ ಹಂಗು ದೊರೆದು ಬೇಕಾ ಬಿಟ್ಟಿ ಬೈಕ್ ವೀಲ್ಹಿಂಗ್ ಮಾಡುತ್ತಿದ್ದರೆ, ಹಿಂಬದಿ ಸವಾರನಾಗಿದ್ದ ಅಪ್ರೋಜ್ ಪಾಷಾ ಕೈಯಲ್ಲಿ ಮಾರುದ್ದ ಲಾಂಗ್ ಹಿಡಿದು ಅದನ್ನು ರಸ್ತೆಗೆ ಸವರುತ್ತಾ ಕೇಕೆ ಹಾಕುತ್ತಾ ಸಂಚರಿಸಿದ್ದರು.

ತಾಜ್ ಉಲ್ಲಾ ಷರೀಪ್ ಅತಿವೇಗವಾಗಿ ಅಡ್ಡಾದಿಡ್ಡಿಯಾಗಿ ಅಜಾಗುರುಕತೆಯಿಂದ ಬೈಕ್ ವೀಲ್ಹಿಂಗ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಕೆ.ಎಸ್.ತಮ್ಮರೆಡ್ಡಿಯವರ ಜಮೀನನ ಬಳಿ ರಸ್ತೆಯ ಮೋರಿಗೆ ಡಿಕ್ಕಿ ಹೊಡೆದಿದ್ದನು. ಡಿಕ್ಕಿ ರಭಸಕ್ಕೆ ಬೈಕ್ ಸವಾರ ತಾಜ್ ಉಲ್ಲಾ ಷರೀಪ್ ಪ್ರಾಣಾಪಾಯದಿಂದ ಪಾರಾಗಿದ್ದನು. ಆದರೆ ಗಂಭೀರ ಗಾಯಗೊಂಡಿದ್ದ ಅಪ್ರೋಜ್ ಪಾಷಾನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕೀತ್ಸೆ ಫಲಕಾರಿಯಾಗದೆ ನಿನ್ನೆ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಂತ್ರ್ಯ ದಿನಚಾರಣೆಗೆ ರಾಷ್ಟ್ರಧ್ವಜಗಳಿಗೆ ಅಧಿಕ ಬೇಡಿಕೆ