Select Your Language

Notifications

webdunia
webdunia
webdunia
Saturday, 29 March 2025
webdunia

ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ : 21 ಲಕ್ಷ ರೂ. ದೋಚಿದ ಪ್ರಿಯತಮೆ!

ಪ್ರಿಯಕರನ ಜೊತೆ ಸೇರಿ ಮಾಜಿ ಪ್ರಿಯಕರನ ಕಿಡ್ನಾಪ್ : 21 ಲಕ್ಷ ರೂ. ದೋಚಿದ ಪ್ರಿಯತಮೆ!
ಚಿಕ್ಕಬಳ್ಳಾಪುರ , ಸೋಮವಾರ, 26 ಜೂನ್ 2023 (11:47 IST)
ಚಿಕ್ಕಬಳ್ಳಾಪುರ : ಮಾಜಿ ಪ್ರಿಯಕರನನ್ನ ಹಾಲಿ ಪ್ರಿಯಕರನಿಂದ ಕಿಡ್ನಾಪ್ ಮಾಡಿಸಿ ಆತನ ಮೇಲೆ ಹಲ್ಲೆ ಮಾಡಿ 21 ಲಕ್ಷ ರೂ. ದೋಚಿರುವ ಘಟನೆ ನಂದಿಗಿರಿಧಾಮದಲ್ಲಿ ನಡೆದಿದೆ.

ಆಂಧ್ರದ ಅನಂತಪುರದ ವಿಜಯ್ ಸಿಂಗ್ ಎಂಬಾತ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. ಈತ ಹಾಗೂ ಆಂಧ್ರದ ಪೊದ್ದಟೂರಿನ ಯುವತಿ ಕಳೆದ ಒಂದೂವರೆ ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಕೆಲ ತಿಂಗಳಿಂದ ಇಬ್ಬರ ಮಧ್ಯೆ ಮನಸ್ತಾಪವಾಗಿ ದೂರ ಆಗಿದ್ದರು. 

ಜೂ.16 ರಂದು ಯುವತಿಯ ಮತ್ತೊಬ್ಬ ಪ್ರಿಯಕರ ಪುಲ್ಲಾರೆಡ್ಡಿ ಎಂಬಾತ ವಿಜಯ್ಸಿಂಗ್ಗೆ ಕರೆ ಮಾಡಿ ಪಾರ್ಟಿ ನೆಪದಲ್ಲಿ ಕರೆದಿದ್ದಾನೆ. ಬಳಿಕ ನಂದಿಬೆಟ್ಟದ ತಪ್ಪಲಿನ ಅಂಗಟ್ಟ ಗ್ರಾಮದ ಬಳಿಯ ಕ್ಯೂವಿಸಿ ವಿಲ್ಲಾಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಸಹಚರರಾದ ಸುಬ್ರಮಣಿ, ಸುಧೀರ್ ಜೊತೆ ಸೇರಿ ಪೆಪ್ಪರ್ ಸ್ಪ್ರೈ ಮುಖಕ್ಕೆ ಸಿಂಪಡಿಸಿ ಹಲ್ಲೆ ನಡೆಸಿದ್ದಾರೆ.

ಬೆಲ್ಟ್ ಹಾಗೂ ಹಗ್ಗದಿಂದ ಮನಸೋ ಇಚ್ಛೆ ಹಲ್ಲೆ ಮಾಡಿ ವೀಡಿಯೋ ಕಾಲ್ ಮೂಲಕ ಯುವತಿ ತೋರಿಸಿದ್ದಾಳೆ. ಮರುದಿನ ಮತ್ತೆ ಯುವತಿಯು ವಿಜಯ್ನನ್ನು ಭೇಟಿಯಾಗಿ ಅವಾಚ್ಯ ಪದಗಳಿಂದ ಬೈದಿದ್ದಾಳೆ. ಅಲ್ಲದೇ ಖಾತೆಯಲ್ಲಿದ್ದ 8 ಲಕ್ಷ ರೂ. ಸೇರಿ ಮತ್ತೆ 13 ಲಕ್ಷ ರೂ. ಆತನ ಮೊಬೈಲ್ ಮೂಲಕ ಅನ್ಲೈನ್ ಆ್ಯಪ್ಗಳಲ್ಲಿ ಲೋನ್ ಪಡೆದು ಬರೋಬ್ಬರಿ 21 ಲಕ್ಷ ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಾಂಬ್ ದಾಳಿ ನಡೆಸಿದವರು ರಕ್ಷಣೆ ಬಗ್ಗೆ ಮಾತಾಡೋದು ಹಾಸ್ಯಾಸ್ಪದ : ನಿರ್ಮಲಾ ಸೀತಾರಾಮನ್