Select Your Language

Notifications

webdunia
webdunia
webdunia
Friday, 4 April 2025
webdunia

ಕಬಿನಿ ನಾಲೆಗೆ ಬಿದ್ದು ಕೊಚ್ಚಿಹೋದ ಬೈಕ್ ಸವಾರ

Bike rider
ಚಾಮರಾಜನಗರ , ಗುರುವಾರ, 3 ಆಗಸ್ಟ್ 2023 (17:00 IST)
ಕಬಿನಿ ನಾಲೆಗೆ ಆಯತಪ್ಪಿ ಬೈಕ್ ಸವಾರ ಬಿದ್ದು, ಕೊಚ್ಚಿ ಹೋಗಿರುವ ಘಟನೆ ಚಾಮರಾಜನಗರ ತಾಲೂಕಿನ ಬಾಗಳಿ ಗ್ರಾಮದಲ್ಲಿ ನಡೆದಿದೆ. ಬಾಗಳಿ ಗ್ರಾಮದ ನಿಂಗರಾಜು ನಾಲೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಹಸುಗಳಿಗೆ ಮೇವು ಕಟ್ಟಿಕೊಂಡು ಏರಿ ಮೇಲೆ ಬರುತ್ತಿದ್ದಾಗ ನಿಂಗರಾಜು ಆಯತಪ್ಪಿ ಬೈಕ್ ಸಮೇತ ನಾಲೆಗೆ ಬಿದ್ದಿದ್ದಾನೆ. ನೀರಿನ ರಭಸಕ್ಕೆ ನಿಂಗರಾಜು ಕೊಚ್ಚಿಕೊಂಡು ಹೋಗಿದ್ದು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಕುದೇರು ಠಾಣೆ ಪೊಲೀಸರು ನಾಪತ್ತೆಯಾಗಿರುವ ನಿಂಗರಾಜುಗಾಗಿ ಹುಡುಕಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಕೊಂದು, ಪತಿಯೂ ಆತ್ಮಹತ್ಯೆ