Select Your Language

Notifications

webdunia
webdunia
webdunia
webdunia

ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ಯಾರಿಸ್ ಮಾಡಿದೆ ಈ ಪ್ಲಾನ್

ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ಯಾರಿಸ್ ಮಾಡಿದೆ ಈ ಪ್ಲಾನ್
ಪ್ಯಾರಿಸ್ , ಗುರುವಾರ, 27 ಜೂನ್ 2019 (09:31 IST)
ಪ್ಯಾರಿಸ್ : 2024ರಲ್ಲಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟದ ವೇಳೆ ಟ್ರಾಫಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ಯಾರಿಸ್ ಆಡಳಿತ ವರ್ಗ ಪ್ಲಾನ್‌ನೊಂದನ್ನು ಮಾಡಿದೆ.




ಚಾರ್ಲೆಸ್ ಡಿ ಗುಲ್ಲೆ ವಿಮಾನ ನಿಲ್ದಾಣದಿಂದ ಕೇಂದ್ರ ಪ್ಯಾರಿಸ್ ಗೆ ರೈಲು ಹಾಗೂ ಬಸ್ ಗಳಲ್ಲಿ ಒಂದು ಗಂಟೆ ಪ್ರಯಾಣ ಬೆಳೆಸಬೇಕಾಗುತ್ತದೆ. ಆದ್ದರಿಂದ ಆ ವೇಳೆ ಏರ್‌ಬೋರ್ನ್ ಟಾಕ್ಸಿ‌ಗಳನ್ನು ಬಳಸಿದರೆ ಪ್ರಯಾಣಿಕರು ಕಡಿಮೆ ಸಮಯದಲ್ಲಿ ತಮ್ಮ ಸ್ಥಳವನ್ನು ತಲುಪಬಹುದು. ಇದರಿಂದ ಟ್ರಾಫಿಕ್ ಜಾಮ್ ಕಡಿಮೆಯಾಗುತ್ತದೆ ಎಂದು ಅಧಿಕಾರಿಗಳು ಈ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.


ಸ್ಥಳೀಯ ವರದಿಗಳ ಪ್ರಕಾರ, ಇನ್ನು 18 ತಿಂಗಳಲ್ಲಿ ಹಾರುವ ಟ್ಯಾಕ್ಸಿ‌ಗಳನ್ನು‌ ಹೋಸ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿರುವ ಸರಿಯಾದ ಜಾಗವನ್ನು ಸಿದ್ದಪಡಿಸಲಾಗುವುದು. ಒಂದು ವೇಳೆ  ಈ ವ್ಯವಸ್ಥೆ ಜಾರಿಗೆ ಬಂದರೆ ಒಲಂಪಿಕ್ಸ್ ವೇಳೆ ಏರ್ ಟ್ಯಾಕ್ಸಿಯಲ್ಲಿ ಪ್ರಯಾಣಿಸಬಹುದು.


  

Share this Story:

Follow Webdunia kannada

ಮುಂದಿನ ಸುದ್ದಿ

ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಮೆಕ್ಯಾನಿಕಲ್ ಇಂಜಿನಿಯರ್