Select Your Language

Notifications

webdunia
webdunia
webdunia
webdunia

ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಮೆಕ್ಯಾನಿಕಲ್ ಇಂಜಿನಿಯರ್

ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸಿದ ಮೆಕ್ಯಾನಿಕಲ್ ಇಂಜಿನಿಯರ್
ಹೈದರಾಬಾದ್ , ಗುರುವಾರ, 27 ಜೂನ್ 2019 (09:19 IST)
ಹೈದರಾಬಾದ್ : ವಾಹನ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕಂಡುಹಿಡಿದಿದ್ದಾರೆ.



ಹೈದರಾಬಾದ್ ನಿವಾಸಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸತೀಶ್ ಎಂಬುವವರು ಹೈಡ್ರಾಕ್ಸಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ಶುರು ಮಾಡಿದ್ದು, ಅಲ್ಲಿ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಸಿದ್ದಪಡಿಸುತ್ತಾರಂತೆ. ಇವರು ಮೂರು ಹಂತದ ಪ್ರಕ್ರಿಯೆ ಮೂಲಕ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸುತ್ತಿದ್ದು, ಇದಕ್ಕೆ ಪ್ಲಾಸ್ಟಿಕ್ ಪೈರೋಲಿಸಿಸ್ ಎಂದು ಹೆಸರಿಟ್ಟಿದ್ದಾರೆ.

 

2016ರಿಂದ ಇಲ್ಲಿಯವರೆಗೆ ಸುಮಾರು 50 ಟನ್ ಪ್ಲಾಸ್ಟಿಕನ್ನು ಪೆಟ್ರೋಲ್ ಆಗಿ ಪರಿವರ್ತಿಸಿದ್ದಾರೆ. ಪ್ರತಿ ದಿನ 200 ಕಿಲೋ ಪ್ಲಾಸ್ಟಿಕನ್ನು 200 ಲೀಟರ್ ಪೆಟ್ರೋಲ್ ಆಗಿ ಪರಿವರ್ತಿಸುತ್ತಿದ್ದಾರೆ. ಇದರಲ್ಲಿ ಸಂಪೂರ್ಣವಾಗಿ ನೀರನ್ನು ಬಳಸಲಾಗುವುದಿಲ್ಲ ಪ್ಲಾಸ್ಟಿಕ್ ನಿಂದ ಸಿದ್ಧವಾದ ಪೆಟ್ರೋಲನ್ನು ಸತೀಶ್ ಲೀಟರ್ ಗೆ 40-50 ರೂಪಾಯಿಗೆ ಮಾರಾಟ ಮಾಡುತ್ತಾರೆ. ವಾಹನಗಳ ಬಳಕೆಗೆ ಇದು ಎಷ್ಟು ಉಪಯೋಗಕಾರಿ ಎಂಬುದು ಇನ್ನೂ ತಿಲಿದುಬಂದಿಲ್ಲ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಲೋಕಸಭೆಯಲ್ಲಿ ಪ್ರಮಾಣವಚನ: ಕ್ಷೇತ್ರದಲ್ಲಿ ನಂಗಾನಾಚ್